ತುಮಕೂರು ತಾಲ್ಲೂಕಿನ ಬೆಳಗುಂಬದ ಕುಂದೂರು ಗ್ರಾಮದಲ್ಲಿ ರೈತರ ತೋಟಗಳ ಬಳಿಕ ಈಗ ಬಡ ಜನರ ಗುಡಿಸಲಿನ ಮೇಲೆ ಅರಣ್ಯ ಇಲಾಖೆ ವಕ್ರದೃಷ್ಟಿ ಬಿದ್ದಿದೆ. ತುಮಕೂರಿನ ಕುಂದೂರು ಗ್ರಾಮದ ಬೆಟ್ಟದ ತಪ್ಪಲಿನಲಿದ್ದ ಗುಡಿಸಲು ತೆರವುಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ. ಗ್ರಾಮಸ್ಥರು ವಿಷದ ಬಾಟಲಿ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಜೆಸಿಬಿ ತಂದು ತೆರವಿಗೆ ಮುಂದಾಗಿದ್ದಾರೆ. ವಾಸವಿರುವ ಗುಡಿಸಲುಗಳನ್ನ ಕೀಳಲು ಪೊಲೀಸರೊಂದಿಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದ್ದಾರೆ. ಸರ್ವೆ ಮಾಡಿಸದೆ ವಾಸದ ಗುಡಿಸಲುಗಳನ್ನು ಕೀಳಲು ಬಂದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ವೆ ಮಾಡಿಸಿ ಸ್ಥಳ ಗುರ್ತಿಸುವವರೆಗೂ ಜಾಗ ಖಾಲಿ ಮಾಡಲ್ಲ ಎಂದು ಕುಂದೂರು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಅರಣ್ಯ ಇಲಾಖೆ ವಿರುದ್ಧ 15 ಎಕರೆ ಜಮೀನನ್ನ ಖಾಸಗಿಯವರಿಗೆ ಅಕ್ರಮವಾಗಿ ಖಾತೆ ಮಾಡಿಸಿದ ಆರೋಪ ಕೇಳಿ ಬಂದಿದೆ. ಲಂಚ ಪಡೆದು ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಅಕ್ರಮ ಖಾತೆಯನ್ನ ರದ್ದು ಮಾಡಿ ಬಡವರಿಗೆ ಜಾಗ ಕೊಡಿ ಎಂದು ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ.
0 108 Less than a minute