ಮಧುಗಿರಿ, ಕೊರಟಗೆರೆ ಕ್ಷೇತ್ರದಲ್ಲಿ ಜನತಾದಳ ಭದ್ರಕೋಟೆಯಾಗಿ ಜನ ಆಶೀರ್ವಾದ ಮಾಡಿದ್ದಾರೆ. ಕೆಲ ಕಾರಣಾಂತರಗಳಲ್ಲಿ ಸೋಲುಂಟಾಗಿದೆ. ಅದು ಕೊರಟಗೆರೆ ಮತದಾರರ ಸೋಲಲ್ಲ. ಅದು ಬೇರೆ ರೀತಿ ಇದೆ, ಅದರ ಹಿನ್ನೆಲೆ ನನಗೆ ಗೊತ್ತು ಎಂದು ತುಮಕೂರಿನ ಕೊರಟಗೆರೆಯಲ್ಲಿ HDK ಹೇಳಿದ್ದಾರೆ.
ಕೊರಟಗೆರೆ ವಿಧಾನಸಭೆ ಕ್ಷೇತ್ರದ ಗೊಂದಿಹಳ್ಳಿ ಗ್ರಾಮದಲ್ಲಿ ಪಂಚರತ್ನ ರಥಯಾತ್ರೆ ನಡೆಸಿದೆ. ಜನತೆಯಿಂದ ಅತ್ಯುತ್ತಮ ಸ್ಪಂದನೆ ಸಿಕ್ಕಿತು.
ಕ್ಷೇತ್ರದ @JanataDal_S ಪಕ್ಷದ ಅಭ್ಯರ್ಥಿ ಶ್ರೀ ಸುಧಾಕರ್ ಲಾಲ್ ಮುಂತಾದವರು ಜತೆಯಲ್ಲಿ ಇದ್ದರು.#ಪಂಚರತ್ನ_ರಥಯಾತ್ರೆ #ಕೊರಟಗೆರೆ pic.twitter.com/dSwqvPknvp— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 3, 2022
ಕಳೆದ ಬಾರಿಯ ಲೋಪ ಸರಿಪಡಿಸುವುದಕ್ಕೆ ಕ್ರಮ ತೆಗೆದುಕೊಂಡಿದ್ದೇವೆ. ಸುಧಾಕರ್ ಲಾಲ್ ಜನತೆ ಆಶೀರ್ವಾದದಿಂದ ಗೆಲ್ತಾರೆ ಎಂದು ಹೇಳಿದ್ರು. ಕಾಂಗ್ರೆಸ್ ( CONGRESS ) ನಲ್ಲಿ ದಲಿತ ಸಿಎಂ ಕೂಗು ವಿಚಾರವಾಗಿ ಮಾತನಾಡಿದ ಅವರು, ಸಿಎಂ ಅನ್ನು ಯಾರು ಮಾಡ್ತಾರೆ, ಎಲ್ಲಿಂದ ಮಾಡ್ತಾರೆ, ಅವರು ಪಾರ್ಟಿ ಅಧ್ಯಕ್ಷರಿದ್ದಾಗಲೇ ಮಾಡಲಿಲ್ಲ. ಪಾರ್ಟಿ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಹೊರಟಾಗ, ಅವರನ್ನು ಜೆಡಿಎಸ್ ನವ್ರು ಸೋಲಿಸಿದ್ರಾ ? ಕಾಂಗ್ರೆಸ್ ನವರೇ ಸೋಲಿಸಿದ್ರು ಅಂತ ಅವರೇ ಹೇಳ್ತಾರೆ. ಅವರು ಏನ್ ಮಾಡ್ತಾರೆ ಅಂತ ನನಗೆ ಗೊತ್ತಿಲ್ಲ. ಸುಧಾಕರ್ ಲಾಲ್ ಅವರು ಅತ್ಯಂತ ಸಭ್ಯ, ಜನತೆ ಜೊತೆಗೆ ಬೆರೆತು ಕೆಲಸ ಮಾಡ್ತಾರೆ. ಅವರನ್ನು ಗೆಲ್ಲಿಸಬೇಕೆಂದು ಜನತೆ ನಿರ್ಧಾರ ಮಾಡಿಕೊಂಡಿದ್ದಾರೆ. ಪರಮೇಶ್ವರ್ ವಿಚಾರ ಹೇಳಲ್ಲ, ನಮ್ಮ ಅಭ್ಯರ್ಥಿ ಗೆಲ್ಲಬೇಕು. ನಾನು ಸ್ಪಷ್ಟವಾದ ಬಹುಮತ ಪಡಿಬೇಕು ಅಂದ್ರೆ, ನನ್ನ ಅಭ್ಯರ್ಥಿಗಳು ಗೆಲ್ಲಲೇ ಬೇಕಲ್ವಾ. ಆ ದೃಷ್ಟಿಯಿಂದ ನಾವು ಕೆಲಸ ಮಾಡಬೇಕು. ಅದು ಅವರ ಪಕ್ಷದ ಸಮಸ್ಯೆ, ನನ್ನ ಸಮಸ್ಯೆಯಲ್ಲ ಎಂದು ತಿಳಿಸಿದ್ರು. ಇದನ್ನೂ ಓದಿ : – ನಾನು ಎಲ್ಲಿಗೆ ಹೋದರೂ ಭಾರತವನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ – ಸುಂದರ್ ಪಿಚೈ
ಬೆಳಗಾವಿ ಗಡಿ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಮತ್ತು ಮಹರಾಷ್ಟ್ರ ಸಚಿವರ ನಡುವಿನ ನಾಟಕ ಏನಿದೆ ಅಂತ ಅವರೇ ಉತ್ತರ ಕೊಡಬೇಕು.ಅವರು ನಮ್ಮವ್ರೆ, ಕನ್ನಡ ಭಾಷೆ ಮಾತನಾಡುವವರು, ಕರ್ನಾಟಕಕ್ಕೆ ನಮ್ಮನ್ನು ತೆಗೆದುಕೊಳ್ಳಿ ಅಂತ ಹೇಳ್ತಿದ್ದಾರೆ. ಸಾಂಗ್ಲಿ ಭಾಗದ 18 -20 ಹಳ್ಳಿಗಳ ರೈತರು ಹಾಗೂ ಜನರ ಬೇಡಿಕೆ ಒಂದು ಭಾಗ. ಇವತ್ತು ಅಲ್ಲಿನ ಜನರ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿ, ಕರ್ನಾಟಕದಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಅದೇ ಸ್ಪೀಡು ನಮ್ಮ ರಾಜ್ಯದೊಳಗೆ ಆಗಬೇಕು, ನಮಗೆ ಟ್ಯಾಕ್ಸ್ ಕಟ್ಟುತ್ತಿದ್ದಾರಲ್ಲ ಜನರ ಹಳ್ಳಿಗಳಲ್ಲಿ ಕುಡಿಯಲು ಪರಿಶುದ್ಧ ನೀರಿಲ್ಲ. ಇಲ್ಲಿಯೂ ಅದೇ ಮುತುವರ್ಜಿ ವಹಿಸಿಕೊಳ್ಳಿ ಅಂತ ಹೇಳ್ತೀನಿ ಎಂದು ಹೇಳಿದ್ರು.
ಇದನ್ನೂ ಓದಿ : – ಪ್ರಧಾನಿ ಮೋದಿ ಜನರ ಹೃದಯ ಗೆದ್ದು ಸಾಮ್ರಾಟ್ ಆಗಿದ್ದಾರೆ – ಸಿ. ಟಿ ರವಿ