ತುಮಕೂರಿ (Tumakuru) ನ ಗ್ರಾಮ ಪಂಚಾಯತಿ (Gram panchayat) ವ್ಯಾಪ್ತಿಯಲ್ಲಿ ಲಂಚ ಕೊಟ್ಟವರಿಗೆ ಮಾತ್ರವೆ ನಿವೇಶನ ಮಂಜೂರು ಮಾಡಲಾಗ್ತಿದೆ ಎಂದು ಪಿಡಿಒ (PDO) ವಿರುದ್ಧ ತುಮಕೂರಿನ ಕೊಂಡ್ಲಿಕ್ರಾಸ್ ನ ನಿವಾಸಿಗಳು ಗಂಭೀರ ಆರೋಪ ಮಾಡಿದ್ದಾರೆ. ದೊಡ್ಡಗುಣಿ ಗ್ರಾಮ ಪಂಚಾಯತಿ PDO ರಂಗಸ್ವಾಮಿ ವಿರುದ್ಧ ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಒಂದು ಲಕ್ಷ ಕೊಟ್ರೆ ನಿವೇಶನ ಮಂಜೂರು, ಇಲ್ಲದಿದ್ರೆ ಗುಡಿಸಲು ತೆರವು ಮಾಡಲಾಗುವುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮುಂದಿಟ್ಟುಕೊಂಡು ಬೆದರಿಕೆ ಹಾಕ್ತಾರಂತೆ. ಸುಮಾರು ವರ್ಷಗಳಿಂದ ವಾಸವಿದ್ರೂ ನಿವೇಶನ ಜಾಗವನ್ನು ಮಂಜೂರು ಮಾಡಿಲ್ಲ. ನಿವೇಶನಕ್ಕೆ ಅರ್ಜಿ (Application) ಸಲ್ಲಿಸಿದರೂ ಕೂಡ ಲಂಚ ಕೊಡದಿದ್ದರೆ ಪಿಡಿಓ ರಂಗಸ್ವಾಮಿ ಕ್ಯಾರೇ ಎನ್ನುತ್ತಿಲ್ಲ. ಜನರ ಪ್ರತಿಭಟನೆಗೆ ಮಣಿದ PDO ರಂಗಸ್ವಾಮಿ ಕಚೇರಿಯಿಂದಲೇ ಕಾಲ್ಕಿತ್ತಿದ್ದಾರೆ. ಮಧ್ಯಾಹ್ನದವರೆಗೂ ಪಿಡಿಓ ರಂಗಸ್ವಾಮಿ ಕಚೇರಿಗೆ ಕಾಲಿಟ್ಟಿರಲಿಲ್ಲ. ಇದನ್ನೂ ಓದಿ : – ನಾವು ಯಾವುದೇ ರೌಡಿಗಳನ್ನು ಪ್ರೋತ್ಸಾಹಿಸಲ್ಲ – ಸಿಎಂ ಬಸವರಾಜ್ ಬೊಮ್ಮಾಯಿ
ವೋಟು (Vote) ಹಾಕಿಸಿಕೊಳ್ಳುವ ಜನಪ್ರತಿನಿಧಿಗಳು ಕೂಡ ಕ್ಯಾರೇ ಎನ್ನುತ್ತಿಲ್ಲ. ಈ ಪಿಡಿಓ ರಂಗನಾಥನಿಂದ ಸೂರಿಲ್ಲದೆ ಕೊಂಡ್ಲಿಕ್ರಾಸ್ ನ ಹತ್ತಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ ನ ಜಾಗದಲ್ಲಿ ಗುಡಿಸಲು ಹಾಕಿದರೂ ಬಿಡ್ತಿಲ್ಲ. ಲಂಚ ಕೊಟ್ಟವರನ್ನ ಬಿಟ್ಟು ಉಳಿದವರ ಗುಡಿಸಲನ್ನು ಅಧಿಕಾರಿಗಳು ಕೆಡವಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ : – ಐರಾ ಹೆಸರಲ್ಲಿ ಪ್ರೊಡಕ್ಷನ್ ಹೌಸ್ ನಿರ್ಮಿಸಿದ ಯಶ್ …!