ಗುಬ್ಬಿಯ ಜೆಡಿಎಸ್ ಉಚ್ಛಾಟಿತ ಶಾಸಕ ಎಸ್ಆರ್ ಶ್ರೀನಿವಾಸ್ ( S.R SRINIVAS ) ಅವರನ್ನು ಜೆಡಿಎಸ್ ಶಾಸಕ ಸಾರಾ ಮಹೇಶ್ ( MAHESH ) ಭೇಟಿಯಾಗಿದ್ದಾರೆ. ತುಮಕೂರಿನ ವಿದ್ಯಾನಗರದಲ್ಲಿರುವ ಎಸ್ಆರ್ ಶ್ರೀನಿವಾಸ್ ನಿವಾಸಕ್ಕೆ ತೆರಳಿ ಸಾರಾ ಮಹೇಶ್ ಮಾತುಕತೆ ನಡೆಸಿರುವುದು ತುಮಕೂರು ಜಿಲ್ಲಾ ರಾಜಕೀಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಮತ್ತೆ ಜೆಡಿಎಸ್ ಕಡೆ ಮುಖ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ಎಸ್ ಆರ್ ಶ್ರೀನಿವಾಸ್ ಭೇಟಿ ಬಳಿಕ ಮಾತನಾಡಿದ ಸಾರಾ ಮಹೇಶ್, ವೈಯಕ್ತಿಕವಾಗಿ ಜೆಡಿಎಸ್ ಕಾರ್ಯಕರ್ತನಾಗಿ ವಾಸು ಜೆಡಿಎಸ್ನಲ್ಲಿ ಇರೋದು ಅವರಿಗೂ ಅನಿವಾರ್ಯ, ನಮ್ಮ ಪಕ್ಷಕ್ಕೂ ಅನಿವಾರ್ಯ. ಎಚ್ಡಿ ಕುಮಾರಸ್ವಾಮಿ ಅವರು ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ. ಇದನ್ನೂ ಓದಿ : – ಕನ್ನಡ ಚಿತ್ರರಂಗದ ಹಿರಿಯ ನಟ ಲೋಹಿತಾಶ್ವ ಇನ್ನಿಲ್ಲ
ವಾಸು ಪಕ್ಷ ಬಿಟ್ಟು ಹೋದರೆ ಅವರಿಗೂ ನಷ್ಟ, ಪಕ್ಷಕ್ಕೂ ನಷ್ಟ ಎಂದು ಹೇಳಿದರು. ಇವರ ಮನೆಗೆ ಬಂದಿರೋದು ರಾಜಕೀಯ ಸಂಬಂಧ ಅಲ್ಲ. ವಾಸು ಮತ್ತೆ ಜೆಡಿಎಸ್ಗೆ ( JDS ) ಯಾಕೆ ವಾಪಸ್ ಬರಬಾರದು ಎಂದು ಪ್ರಶ್ನಿಸಿದ್ದಾರೆ. ಜಿಟಿ ದೇವೆಗೌಡರಿಗೆ ಸಾರಾ ಮಹೇಶ್ಗೆ ಆಗೋದೆ ಇಲ್ಲ ಅಂತಾರೆ. ಅವರ ಜೊತೆ ನಾವು ಚೆನ್ನಾಗಿಯೇ ಇಲ್ವಾ. ನಮಗೆ ಶ್ರೀನಿವಾಸ್ಗೂ ಇಬ್ಬರಿಗೂ ಬೇಕಾದತಂಹ ಸ್ನೇಹ ನಮ್ಮದು ಎಂದು ಹೇಳಿದ್ದಾರೆ.
ಇದನ್ನೂ ಓದಿ : – ಸತೀಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಅನಗತ್ಯ ವಿವಾದ ಮಾಡಬಾರದು- ಬಿ.ಕೆ.ಹರಿಪ್ರಸಾದ್