ದೇವೇಗೌಡರು ಇಬ್ಬರು ಮೇಲೆ ಕೈ ಹಾಕೊಂಡು ಹಾಕ್ಕೊಂಡು ಹೋಗ್ತಾವ್ರೇ. ಹತ್ತಿರದಲ್ಲೇ ಇದೇ ನಾಲ್ವರ ಮೇಲೆ ಹೋಗೊದು ಅಂತಾ ದೇವೇಗೌಡರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ (CONGRESS) ಮುಖಂಡ ರಾಜಣ್ಣ (RAJANNA) ಹೇಳಿಕೆ ಖಂಡಿಸಿ ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ಶಾಸಕ ವೀರಭದ್ರಯ್ಯ (VEERBHADRAIAH) ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ತುಮಕೂರು ಜಿಲ್ಲೆಯ ಮಧುಗಿರಿ(MADHUGIRI) ಯ ಕಾವಣದಾಲ ಗ್ರಾಮದ ಕಾರ್ಯಕ್ರಮದಲ್ಲಿ ಕಾರ್ಯಕರ್ತರ ಜೊತೆ ಮಾತನಾಡುತ್ತಾ ಜೋಷ್ ನಲ್ಲಿ ದೇವೇಗೌಡ (Devegowda) ರು ಇಬ್ಬರ ಮೇಲೆ ಕೈ ಹಾಕ್ಕೊಂಡು ಹೋಗ್ತಾವ್ರೇ. ದೇವೇಗೌಡರನ್ನ ನಾಲ್ವರು ಹೊತ್ತುಕೊಂಡು ಹೋಗೋ ದಿನ ಹತ್ತಿರ ಬರುತ್ತೆ ಎಂದು ನಾಲಿಗೆ ಹರಿಬಿಟ್ಟಿದ್ದರು.
ಇದನ್ನೂ ಓದಿ : – ಕೈ ಬಿಟ್ಟು ತೆನೆ ಹೊರಲು ಸಜ್ಜಾಗುತ್ತಿದ್ದಾರಾ ಮಾಜಿ ಸಂಸದ ಕೆ.ಹೆಚ್ ಮುನಿಯಪ್ಪ?