ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಇಂದು ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಿದೆ.
ಭಾರತದ ಚೊಚ್ಚಲ ಬಾಹ್ಯಾಕಾಶ ಆಧಾರಿತ ಸೌರ ಮಿಷನ್, ಆದಿತ್ಯ ಎಲ್1 ನೌಕೆಯು ಇಂದು ಅಂತಿಮ ಕಕ್ಷೆಯನ್ನು ಸೇರಿದೆ. ಸಂಜೆ 4 ಗಂಟೆ ಗೆ ಬಾಹ್ಯಾಕಾಶ ನೌಕೆಯು ಸೂರ್ಯನ ಲ್ಯಾಗ್ರೇಂಜ್ ಪಾಯಿಂಟ್ ಸೇರಿದ್ದು, ಅಂತಿಮ ಹಂತದ ಕಕ್ಷೆ ಬದಲಾವಣೆಯಾದ ಹಿನ್ನೆಲೆಯಲ್ಲಿ ಇಸ್ರೋ ಮಹತ್ವದ ಮೈಲುಗಲ್ಲು ಮುಟ್ಟಿದೆ.
ಸೂರ್ಯನ ವಿವರವಾದ ಅಧ್ಯಯನಕ್ಕಾಗಿ ಆದಿತ್ಯ ಎಲ್ -1 ಏಳು ವಿಭಿನ್ನ ಪೇಲೋಡ್‌ಗಳನ್ನು ಹೊಂದಿದೆ. ಅವುಗಳ ಪೈಕಿ ನಾಲ್ಕು ಸೂರ್ಯನ ಬೆಳಕನ್ನು ಪರಿಶೀಲಿಸಿದೆ ಮತ್ತು ಇತರ ಮೂರು ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರಗಳ ಇನ್-ಸಿಟು ನಿಯತಾಂಕಗಳನ್ನು ಅಳೆಯಲಿದೆ. ಈ ಉಪಕರಣಗಳು ಸೌರ ಜ್ವಾಲೆಗಳು ಮತ್ತು ಕರೋನಲ್ ಮಾಸ್ ಎಜೆಕ್ಷನ್‌ಗಳಂತಹ ಸೌರ ಚಟುವಟಿಕೆಗಳ ಡೇಟಾವನ್ನು ಒದಗಿಸಲಿದೆ.
ಲ್ಯಾಂಗ್ರೆಸ್ ಪಾಯಿಂಟ್ ಎಂದರೇನು?
ಇಸ್ರೋ ಪ್ರಕಾರ, ಬಾಹ್ಯಾಕಾಶ ನೌಕೆ ಆದಿತ್ಯ ಎಲ್-1 ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಸೂರ್ಯ-ಭೂಮಿ ವ್ಯವಸ್ಥೆಯ ‘ಲಾಗ್ರೇಂಜ್ ಪಾಯಿಂಟ್ 1 (ಎಲ್1) ಸುತ್ತ ‘ಹಾಲೋ’ ಕಕ್ಷೆಯನ್ನು ತಲುಪಿದೆ. ‘L1 ಪಾಯಿಂಟ್’ ಭೂಮಿ ಮತ್ತು ಸೂರ್ಯನ ನಡುವಿನ ಒಟ್ಟು ಅಂತರದ ನಡುವಿನ ಗುರುತ್ವಾಕರ್ಷಣೆಯು ನಿಷ್ಕ್ರಿಯವಾಗುವ ಪ್ರದೇಶವನ್ನು ‘ಲಗ್ರೇಂಜ್ ಪಾಯಿಂಟ್’ ಎಂದು ಕರೆಯಲಾಗುತ್ತದೆ. ‘ಹಾಲೋ’ ಕಕ್ಷೆಯು L1, L2 ಅಥವಾ L3 ‘ಲ್ಯಾಗ್ರೇಂಜ್ ಪಾಯಿಂಟ್’ಗಳಲ್ಲಿ ಒಂದರ ಸಮೀಪವಿರುವ ಆವರ್ತಕ, ಮೂರು ಆಯಾಮದ ಕಕ್ಷೆಯಾಗಿದೆ.