ಹಾಲಿನ ಉತ್ಪನ್ನಗಳನ್ನು ಮಿತ ಪ್ರಮಾಣದಲ್ಲಿ ಬಳಕೆ ಮಾಡಿದರೆ ದೇಹದ ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳು ಇವೆ ಎಂದು ಆಯುರ್ವೇದ ಹೇಳುತ್ತದೆ.
ಅದರಲ್ಲೂ ಹಾಲು, ಮೊಸರು ಹಾಗೂ ಮಜ್ಜಿಗೆಯನ್ನು ದಿನನಿತ್ಯ ಸೇವಿಸಿದರೆ ಅದರಿಂದ ಆರೋಗ್ಯವಾಗಿರಬಹುದು ಎಂದು ಹೇಳಲಾಗುತ್ತದೆ. ನಾವು ಆಧುನೀಕರಣಕ್ಕೆ ಹೊಂದಿಕೊಂಡು ಮಜ್ಜಿಗೆಯಂತಹ ಆರೋಗ್ಯಕಾರಿ ಪಾನೀಯವನ್ನು ಕಡೆಗಣಿಸಿ, ತಂಪು ಪಾನೀಯ ಗಳನ್ನು ಊಟವಾದ ಬಳಿಕ ಕುಡಿಯುತ್ತಿದ್ದೇವೆ.
ಇದು ಆರೋಗ್ಯಕ್ಕೆ ತುಂಬಾ ಮಾರಕ. ಇದರ ಬದಲು ಮಜ್ಜಿಗೆ ಕುಡಿದರೆ ಅದರಿಂದ ದೇಹವು ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ನೆರವಾಗುವುದು. ಇಷ್ಟು ಮಾತ್ರವಲ್ಲದೆ ತುಂಬಾ ಸೆಕೆ ಅಥವಾ ಉಷ್ಣತೆ ಇರುವ ಸಂದರ್ಭದಲ್ಲಿ ಇದು ದೇಹಕ್ಕೆ ಶಮನ ನೀಡುವುದು. ಇದನ್ನು ಓದಿ :- ಟೊಮ್ಯಾಟೋ ದಿಂದ ಮುಖದ ಕಾಂತಿಯನ್ನು ಹೆಚ್ಚಿಸುವುದು ಹೇಗೆ..?
ಎರಡು ಹೊತ್ತಿನ ಊಟ ಮಾಡುವ ಸಂದರ್ಭದಲ್ಲಿ ಒಂದು ಹೊತ್ತು ನೀವು ಮಜ್ಜಿಗೆ ಕುಡಿದರೆ ಅದು ನಿಮ್ಮ ಆರೋಗ್ಯ ಕಾಪಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಮಜ್ಜಿಗೆಯಲ್ಲಿ ಕೊಬ್ಬಿನಾಂಶವು ತುಂಬಾ ಕಡಿಮೆ ಇರುವ ಕಾರಣದಿಂದ ಮಜ್ಜಿಗೆಯು ತೂಕ ಇಳಿಸಿ ಕೊಳ್ಳಲು ತುಂಬಾ ಸಹಕಾರಿ.
ಮಜ್ಜಿಗೆಯಲ್ಲಿ ಉನ್ನತ ಮಟ್ಟದ ವಿಟಮಿನ್ ಗಳು, ಖನಿಜಾಂಶಗಳು, ಪೋಷಕಾಂಶಗಳಾದ ಪ್ರೋಟೀನ್, ಕ್ಯಾಲ್ಸಿಯಂ, ಪೊಟಾಶೀಯಂ, ಮೆಗ್ನಿಶಿಯಂ ಮತ್ತು ಇತರ ಕಿಣ್ವಗಳು ಇವೆ. ಇದು ದೇಹದಲ್ಲಿ ಶಕ್ತಿಯ ಮಟ್ಟವನ್ನು ಕಾಪಾಡಲು ನೆರವಾಗುವುದು. ಇದು ಹಸಿವನ್ನು ಹೆಚ್ಚಿಸಿದರೂ ನೀವು ಅನಾರೋಗ್ಯಕಾರಿ ಹಾಗೂ ಜಂಕ್ ಫುಡ್ ತಿನ್ನುವುದನ್ನು ಇದು ಕಡಿಮೆ ಮಾಡುವುದು.
ಮಜ್ಜಿಗೆಯಲ್ಲಿ ಇರುವಂತಹ ಕೆಲವೊಂದು ಅಂಶಗಳು ಜೈವಿಕ ಸಕ್ರಿಯ ಪ್ರೋಟೀನ್ ಗಳಿಂದ ಸಮೃದ್ಧವಾಗಿದೆ. ಇದು ಕೊಲೆಸ್ಟ್ರಾಲ್ ನ್ನು ತಗ್ಗಿಸುವುದು ಮತ್ತು ಬ್ಯಾಕ್ಟೀರಿಯಾ ಹಾಗೂ ಸೋಂಕು ವಿರೋಧಿ ಗುಣಗಳನ್ನು ಹೊಂದಿದೆ. ನಿಯಮಿತವಾಗಿ ಮಜ್ಜಿಗೆ ಕುಡಿದರೆ ಅದರಿಂದ ರಕ್ತದೊತ್ತಡವು ಗಣನೀಯವಾಗಿ ಕಡಿಮೆ ಆಗಿರುವುದು ಅಧ್ಯಯನಗಳಿಂದಲೂ ಪತ್ತೆ ಆಗಿದೆ.
ಇದನ್ನು ಓದಿ :- ಸೌತೆಕಾಯಿ ಸೇವನೆಯಿಂದ ದೇಹಕ್ಕೆ ಆಗುವ ಉಪಯೋಗಗಳೇನು ಗೊತ್ತಾ..?