ಬೇಸಿಗೆಯಲ್ಲಿ ಯಾವ ರೀತಿಯ ಆಹಾರ ಸೇವಿಸಿದರೆ ಒಳ್ಳೆಯದು, ಅವುಗಳಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ಇಲ್ಲಿ ವಿವರವಾಗಿ ಕೊಡಲಾಗಿದೆ. ಬೇಸಿಗೆ ಕಾಲದಲ್ಲಿ ಡಿಹೈಡ್ರೇಷನ್ ಅಥವಾ ನಿರ್ಜಲೀಕರಣ ಉಂಟಾಗುವುದು ತುಂಬಾ ಸಾಮಾನ್ಯವಾಗಿದೆ. ಇದಕ್ಕಾಗಿಯೇ ತಜ್ಞರು ಹಸಿರು ತರಕಾರಿಗಳು, ಕಲರ್ ಫುಲ್ ಹಣ್ಣುಗಳು ಮತ್ತು ಗಿಡಮೂಲಿಕೆಗಳನ್ನು ಸೇವಿಸುವಂತೆ ಸೂಚಿಸುತ್ತಾರೆ. ಇವು ದೇಹವು ಅದರ ಹೈಡ್ರೇಶನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ರಕ್ಷಿಸುತ್ತದೆ.
ನಿಮ್ಮ ಆಹಾರವನ್ನು ಸಹ ಸಮ್ಮರ್ ಫ್ರೆಂಡ್ಲಿ ಆಗಿ ಬದಲಾಯಿಸಲು ಯೋಜಿಸಿದರೆ ನಿಮ್ಮ ಆಲೋಚನೆ ಸರಿಯಾಗಿದೆ. ಟೊಮೇಟೊದಲ್ಲಿ ವಿಟಮಿನ್ ಸಿ ಮತ್ತು ಲೈಕೋಪೀನ್’ನಂತಹ ಉತ್ಕರ್ಷಣ ನಿರೋಧಕಗಳು ತುಂಬಿರುತ್ತವೆ. ಇದು ಒಟ್ಟಾರೆ ಆರೋಗ್ಯಕ್ಕೆ ಮತ್ತು ಚರ್ಮಕ್ಕೆ ಸಹಕಾರಿಯಾಗಿದೆ. ಆದ್ದರಿಂದ ಟೊಮೆಟೊವನ್ನು ಸಲಾಡ್ ಮಿಕ್ಸ್, ರಾಯಿತಾ, ಸ್ಯಾಂಡ್ವಿಚ್ ಅಥವಾ ಲೆಟಿಸ್ ರಾಪ್ಸ್’ನಲ್ಲಿ ಮಿಕ್ಸ್ ಮಾಡಿ ತಿನ್ನಬಹುದು. ಕಾಟೇಜ್ ಚೀಸ್ ಜೊತೆ ಸ್ಕಿವರ್ಸ್ ಆಗಿಯೂ ಸೇವಿಸಬಹುದು. ಇದನ್ನು ಓದಿ :- ನೀವೂ ಫಿಟ್ ಆಗಲು ಬಯಸುತ್ತೀರಾ ? ನಿಮ್ಮ ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಇವುಗಳನ್ನ ಬಳಸಿ..
ಕಲ್ಲಂಗಡಿ ಹಣ್ಣಿನಲ್ಲಿ ನೀರು ಸಮೃದ್ಧವಾಗಿದ್ದು, ಹೈಡ್ರೇಶನ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಲೈಕೋಪೀನ್ ಅನ್ನು ಸಹ ಹೊಂದಿರುತ್ತದೆ. ಇದು ಚರ್ಮದ ಕೋಶಗಳನ್ನು ಸೂರ್ಯನ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಸೌತೆಕಾಯಿಯನ್ನು ಹೋಲುವ ಜ಼ುಕೀನಿ ಸಂಪೂರ್ಣವಾಗಿ ನೀರಿನಿಂದ ಕೂಡಿದೆ ಇದು ಬೇಸಿಗೆಯಲ್ಲಿ ಸೇವಿಸಬೇಕಾದ ಪರಿಪೂರ್ಣ ಆಹಾರವಾಗಿದೆ.
ವಿಟಮಿನ್ ಸಿ ಸಮೃದ್ಧವಾಗಿ ಹೊಂದಿರುವ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚರ್ಮ ಮತ್ತು ಕಣ್ಣಿನ ಆರೈಕೆಗೂ ಸಹಕಾರಿಯಾಗಿದೆ. ಕಿತ್ತಳೆ ಹಣ್ಣು ಸೀಸನಲ್ ಸಮ್ಮರ್ ಫ್ರೂಟ್. ಇದು ವಿಟಮಿನ್ ಸಿ ಹೊಂದಿರುವುದರಿಂದ ಜನಪ್ರಿಯವಾಗಿದೆ. ಕಿತ್ತಳೆ ಹಣ್ಣನ್ನು ಸಿಪ್ಪೆ ಬಿಡಿಸಿ, ಹಾಗೆ ಇಡಿಯಾಗಿ ಸೇವಿಸಬಹುದು ಅಥವಾ ಜ್ಯೂಸ್ ಮಾಡಿಕೊಂಡು ಕುಡಿಯಬಹುದು.
ಇದನ್ನು ಓದಿ :- ಊಟದ ನಂತರ ಯಾವ ಹಣ್ಣನ್ನು ಸೇವಿಸಬೇಕು ಗೊತ್ತಾ..? ಇಲ್ಲಿದೆ ಸಂಪೂರ್ಣ ಮಾಹಿತಿ