ಬೇಸಿಗೆಯಲ್ಲಿ ಕಠಿಣವಾದ ಬಿಸಿಲು ಮತ್ತು ಏರುತ್ತಿರುವ ತಾಪಮಾನದಲ್ಲಿ, ನಾವು ಆರೋಗ್ಯಕರ ಜೀವನಶೈಲಿಯನ್ನು(Lifestyle) ಅನುಸರಿಸುವುದು ಅವಶ್ಯಕ. ಈ ಬಾರಿ ಬೇಸಿಗೆ ದಾಹ ಹೇಳತೀರದಾಗಿದೆ. ಎಷ್ಟು ನೀರು ಕುಡಿದ್ರು ಸಾಕಾಗುತ್ತಿಲ್ಲ. ಹಣ್ಣು ತಿಂದ್ರೂ ಇನ್ನೂ ತಿನ್ನಬೇಕು ಅನ್ನಿಸತ್ತೆ.
ಬೇಸಿಗೆಯಲ್ಲಿ (Summer) ಚರ್ಮದ ಸಮಸ್ಯೆಗಳು (Skin Problems) ಹೆಚ್ಚಾಗುತ್ತೆ. ಬೆವರು ಗುಳ್ಳೆ, ತುರಿಕೆಯಂತಹ ಸಮಸ್ಯೆಗಳು ಹಲವರನ್ನು ಕಾಡುತ್ತೆ. ಬೇಸಿಗೆಯಲ್ಲಿ ಜೀವನಶೈಲಿಯನ್ನು ಕೊಂಚ ಬದಲಾವಣೆ ಮಾಡಿಕೊಳ್ಳುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಬೇಸಿಗೆ ಬಂತೆಂದರೆ ತ್ವಚೆಯನ್ನು ಕಾಪಾಡಿಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಬೆವರಿನಿಂದ ಉಂಟಾಗುವ ತೇವಾಂಶದಿಂದ ಚರ್ಮ ಸಮಸ್ಯೆಗಳು ಹೆಚ್ಚಾಗುತ್ತೆ. ಬೇಸಿಗೆಯಲ್ಲಿ, ನಿರ್ಜಲೀಕರಣ, ಬಿಸಿಲು, ಬ್ಲ್ಯಾಕ್ ಹೆಡ್ಸ್ ಮತ್ತು ಮೊಡವೆ,
ತುರಿಕೆ, ಬೆವರು ಗುಳ್ಳೆಗಳಂತಹ ಸಮಸ್ಯೆಗಳು ಹೆಚ್ಚುತ್ತದೆ
ಬೇಸಿಗೆಯಲ್ಲಿ ಆದಷ್ಟು ಸಡಿಲವಾದ ಬಟ್ಟೆಗಳನ್ನು ಧರಿಸಿ: ಬಿಸಿಲಿಗೆ ಅತಿಯಾಗಿ ಬೆವರುತ್ತಿದ್ರೆ ಹಗುರವಾದ ಕಾಟನ್ ಬಟ್ಟೆಗಳನ್ನು ಹಾಕಿಕೊಳ್ಳಿ. ಬಿಗಿಯಾದ ಬಟ್ಟೆಗಳನ್ನು ಧರಿಸುವುದನ್ನು ನಿಲ್ಲಿಸಿ. ಇದು ಚರ್ಮದ ತುರಿಕೆಗೆ ಕಾರಣವಾಗುತ್ತೆ. ಬೇಸಿಗೆಯಲ್ಲಿ ಹಣ್ಣುಗಳು ಮತ್ತು ತರಕಾರಿಗಳಿಂದ ಸಮೃದ್ಧವಾಗಿರುವ ಆಹಾರವನ್ನು ತಿನ್ನಿ. ಸಂಸ್ಕರಿಸಿದ ಆಹಾರಗಳು, ಕರಿದ ಮತ್ತು ಮಸಾಲೆಯುಕ್ತ ಆಹಾರಗಳು, ಕೆಂಪು ಮಾಂಸದ ಆಹಾರಗಳಿಂದ ದೂರವಿರಿ. ಬೇಸಿಗೆ ದೇಹದಲ್ಲಿ ಸಾಕಷ್ಟು ಶಾಖವನ್ನು ಉಂಟುಮಾಡಬಹುದು, ಇದು ಆಮ್ಲೀಯತೆಗೆ ಕಾರಣವಾಗುತ್ತದೆ. ಆದ್ದರಿಂದ ಸಬ್ಜಾ ಬೀಜದ ಪಾನೀಯಗಳು, ಕೆಫೀರ್ ಡ್ರಿಂಕ್ ಮತ್ತು ನಿಂಬೆ ನೀರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ.
ಸಾಧ್ಯವಾದಷ್ಟು ನೀರು ಕುಡಿಯಿರಿ
ಬೇಸಿಗೆಯಲ್ಲಿ ಶಾಖ ಮತ್ತು ಬೆವರುವಿಕೆಯಿಂದಾಗಿ, ನಿರ್ಜಲೀಕರಣವನ್ನು ಅನುಭವಿಸುತ್ತೀರಿ. ಹೀಗಾಗಿ ಪ್ರತಿದಿನ ಕನಿಷ್ಠ 2 ರಿಂದ 3 ಲೀಟರ್ ನೀರು ಕುಡಿಯಿರಿ. ಐಸ್ಡ್ ಟೀ, ಹರ್ಬಲ್ ಟೀ, ಸರಳ ನೀರು, ಎಳನೀರು, ನಿಂಬೆ ಮತ್ತು ಸೌತೆಕಾಯಿ ಇತ್ಯಾದಿ ಪಾನೀಯಗಳನ್ನು ಕುಡಿಯಿರಿ. ಬಾಯಾರಿಕೆ ಆಗದಿದ್ದರೂ ನೀರು ಕುಡಿಯಿರಿ.
ವಿಶ್ರಾಂತಿಗೆ ಆದ್ಯತೆ ನೀಡಿ
ಬೇಸಿಗೆಯ ದಿನಗಳು ದಣಿವನ್ನು ಉಂಟು ಮಾಡುತ್ತದೆ. ಆಯಾಸವನ್ನು ತಪ್ಪಿಸಲು ನಿಮಗೆ ಸಾಕಷ್ಟು ವಿಶ್ರಾಂತಿ ಬೇಕು. ತಜ್ಞರ ಪ್ರಕಾರ, ರಾತ್ರಿಯಲ್ಲಿ ಸುಮಾರು 7 ರಿಂದ 9 ಗಂಟೆಗಳ ನಿದ್ದೆ ಮಾಡಬೇಕು.
ವ್ಯಾಯಾಮ
ಚಳಿಗಾಲಕ್ಕಿಂತ ಬೇಸಿಗೆಯಲ್ಲಿ ಬೆಳಿಗ್ಗೆ ಏಳುವುದು ಅಷ್ಟು ಕಷ್ಟ ಅಲ್ಲ. ಅಂತಹ ಪರಿಸ್ಥಿತಿಯಲ್ಲಿ, ಬೆಳಿಗ್ಗೆ ಬೇಗನೆ ಎದ್ದು ಯೋಗ ಮತ್ತು ವ್ಯಾಯಾಮ ಮಾಡಿ. ಇದು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿಡಲು ಕೆಲಸ ಮಾಡುತ್ತದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.