ಮೊಮೊಸ್ ಎಂದ ತಕ್ಷಣ ಹಲವರಿಗೆ ಬಾಯಲ್ಲಿ ನೀರು ಬರುತ್ತದೆ. ಸ್ಟ್ರೀಟ್ ಫುಡ್ ಆಗಿರುವ ಮೊಮೊಸ್ ನ ರುಚಿಯೇ ಅಂತಹದ್ದು.
ಇಂದು ನಾವು ತುಂಬಾನೆ ರುಚಿಯಾಗಿರುವ ಚಿಕನ್ ಸ್ಟೀಮ್ಡ್ ಮೊಮೊಸ್ ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ಮೊಮೊಸ್ ಪ್ರಿಯರು ಖಂಡಿತವಾಗಿ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ.
ಸ್ಟಫಿಂಗ್ ತಯಾರಿಸಲು
ಬೇಯಿಸಿದ ಚಿಕನ್ ಬ್ರೆಸ್ಟ್ – 200 ಗ್ರಾಂ
ಉಪ್ಪು – ರುಚಿಗೆ ತಕ್ಕಷ್ಟು
ಸ್ಪ್ರಿಂಗ್ ಆನಿಯನ್ – ಕಾಲು ಕಪ್
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಕರಿಮೆಣಸಿನ ಪುಡಿ – 1 ಟೀಸ್ಪೂನ್
ಹೆಚ್ಚಿದ ಈರುಳ್ಳಿ – 1
ಎಣ್ಣೆ – ಅರ್ಧ ಟೀಸ್ಪೂನ್
ಚಿಲ್ಲಿ ಟೊಮೆಟೊ ಕೆಚಪ್ – ಐಚ್ಛಿಕ
ಹಿಟ್ಟು ತಯಾರಿಸಲು:
ಮೈದಾ – 2 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯಕ್ಕೆ ತಕ್ಕಂತೆ ಇದನ್ನೂ ಓದಿ :- ಅತೀ ಸುಲಭವಾಗಿ ಮಂಗಳೂರು ಬನ್ಸ್ ಮಾಡುವುದು ಹೇಗೆ ಗೊತ್ತಾ..?
ಮೊದಲಿಗೆ ಹಿಟ್ಟನ್ನು ತಯಾರಿಸಲು ಒಂದು ಬೌಲ್ ತೆಗೆದುಕೊಂಡು, ಅದಕ್ಕೆ ಮೈದಾ ಹಿಟ್ಟು, ಉಪ್ಪು ಹಾಗೂ ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ, ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ತಣ್ಣನೆಯ ಬಟ್ಟೆಯನ್ನು ಅದರ ಮೇಲೆ ಮುಚ್ಚಿ, 30 ನಿಮಿಷ ನೆನೆಯಲು ಪಕ್ಕಕ್ಕಿಡಿ.
ಈ ನಡುವೆ ಚಿಕನ್ ಫಿಲ್ಲಿಂಗ್ಸ್ ತಯಾರಿಸಬೇಕು. ಇದಕ್ಕೆ ಇನ್ನೊಂದು ಪಾತ್ರೆ ತೆಗೆದುಕೊಂಡು, ಬೇಯಿಸಿದ ಚಿಕನ್ , ಉಪ್ಪು, ಸ್ಪ್ರಿಂಗ್ ಆನಿಯನ್, ಕೊತ್ತಂಬರಿ ಸೊಪ್ಪು, ಕರಿಮೆಣಸಿನ ಪುಡಿ, ಈರುಳ್ಳಿ, ಅರ್ಧ ಟೀ ಸ್ಪೂನ್ ಎಣ್ಣೆ ಹಾಕಿ, ಬ್ಲೆಂಡರ್ ಗೆ ವರ್ಗಾಯಿಸಿ. ಅದನ್ನು ಒರಟಾಗಿ ಬ್ಲೆಂಡ್ ಮಾಡಿ. ಈಗ ಮೈದಾ ಹಿಟ್ಟನ್ನು ತೆಗೆದುಕೊಂಡು, ಪುಟ್ಟ ಪುಟ್ಟ ಉಂಡೆಗಳನ್ನು ತಯಾರಿಸಿ. ಪೂರಿಗಿಂತಲೂ ಸ್ವಲ್ಪ ಸಣ್ಣದಾಗಿ ಲಟ್ಟಿಸಿ, ಅದರ ಮೇಲೆ ಚಿಕನ್ ಮಿಶ್ರಣವನ್ನು 1 ಟೀಸ್ಪೂನ್ ನಷ್ಟು ಹಾಕಿ, ಹಿಟ್ಟಿನ ಅಂಚುಗಳನ್ನು ಜೋಡಿಸಿ. ಹಿಟ್ಟು ಒಡೆದು, ಸ್ಟಫಿಂಗ್ ಹೊರ ಬರದಂತೆ ಗಮನಹರಿಸಿ.
ಈಗ ಬಿಸಿ ಮಾಡಿದ ಸ್ಟೀಮರ್ ನಲ್ಲಿ ಪುಟ್ಟ ಪುಟ್ಟ ಮೊಮೊಸ್ ಗಳನ್ನು 15-20 ನಿಮಿಷಗಳ ವರೆಗೆ ಬೇಯಲು ಬಿಡಿ. ಇದೀಗ ರುಚಿಕರವಾದ ಚಿಕನ್ ಸ್ಟೀಮ್ಡ್ ಮೊಮೊಸ್ ತಯಾರಾಗಿದ್ದು, ಕೆಚಪ್ ನೊಂದಿಗೆ ಸವಿಯಿರಿ.
ಇದನ್ನೂ ಓದಿ :- EGG CUTLET – ಸಂಜೆ ಸ್ನ್ಯಾಕ್ಸ್ ಗೆ ಈಸಿಯಾಗಿ ಮೊಟ್ಟೆ ಕಟ್ಲೆಟ್ ಮಾಡಿ..!