ಗುಜರಾತಿನ ಫೇಮಸ್ ಫುಡ್ ಧೋಕ್ಲಾ ಮಾಡೋದು ಹೇಗೆ ಗೊತ್ತಾ…?

ಗುಜರಾತಿನ ಫೇಮಸ್ ಫುಡ್ ಧೋಕ್ಲಾ ಎಂದರೆ ತಿಂಡಿ ಪ್ರಿಯರಿಗೆ ಸಖತ್ ಇಷ್ಟ. ಈ ತಿನಿಸು ಸಿಹಿ ಮತ್ತು ಹುಳಿ ಮಿಶ್ರಣ ಇರುವುದರಿಂದ ಮಕ್ಕಳಿಗೂ ಇದು ಇಷ್ಟವಾಗುತ್ತೆ.

ಗುಜರಾತಿನ ಫೇಮಸ್ ಫುಡ್ ಧೋಕ್ಲಾ ಎಂದರೆ ತಿಂಡಿ ಪ್ರಿಯರಿಗೆ ಸಖತ್ ಇಷ್ಟ. ಈ ತಿನಿಸು ಸಿಹಿ ಮತ್ತು ಹುಳಿ ಮಿಶ್ರಣ ಇರುವುದರಿಂದ ಮಕ್ಕಳಿಗೂ ಇದು ಇಷ್ಟವಾಗುತ್ತೆ. ಈ ತಿನಿಸನ್ನು ನೋಡಿದ ಎಷ್ಟೋ ಜನರು ಇದನ್ನು ಮಾಡುವುದು ಕಷ್ಟ ಎಂದೇ ಭಾವಿಸುತ್ತಾರೆ. ಆದರೆ ಈ ರೆಸಿಪಿ ತುಂಬಾ ಸಿಂಪಲ್. ನೀವು ಇದನ್ನು ಮನೆಯಲ್ಲಿ ಟ್ರೈ ಮಾಡಿ.


ಬೇಕಾಗಿರುವ ಪದಾರ್ಥಗಳು
ಕಡಲೆ ಹಿಟ್ಟು – 1 ಕಪ್
ರವಾ – 3 ಟೇಬಲ್ ಸ್ಪೂನ್
ಶುಂಠಿ ಪೇಸ್ಟ್ – ಅರ್ಧ ಟೀ ಸ್ಪೂನ್
ಮೆಣಸಿನಕಾಯಿ – 2
ಅರಿಶಿನ – ಅರ್ಧ ಟೀಸ್ಪೂನ್
ಸಕ್ಕರೆ – 1 ಟೀ ಸ್ಪೂನ್
ಹಿಂಗು – ಪಿಂಚ್
ಉಪ್ಪು – ಅರ್ಧ ಟೀ ಸ್ಪೂನ್
ನಿಂಬೆ ರಸ – 1 ಟೇಬಲ್ ಸ್ಪೂನ್
ಎಣ್ಣೆ – 1 ಟೇಬಲ್ ಸ್ಪೂನ್
ನೀರು – 1 ಕಪ್
ಸೋಡಾ – ಅರ್ಧ ಟೀ ಸ್ಪೂನ್
ತೆಂಗಿನಕಾಯಿ ತುರಿ – 2 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್ ಇದನ್ನೂ ಓದಿ :- EGG CUTLET – ಸಂಜೆ ಸ್ನ್ಯಾಕ್ಸ್ ಗೆ ಈಸಿಯಾಗಿ ಮೊಟ್ಟೆ ಕಟ್ಲೆಟ್ ಮಾಡಿ..!

ಮಾಡುವ ವಿಧಾನ :-
ಮೊದಲಿಗೆ ದೊಡ್ಡ ಬೌಲ್ನಲ್ಲಿ ಕಡಲೆ ಹಿಟ್ಟು ಮತ್ತು ರವಾ ಜರಡಿ ಇಡಿದುಕೊಳ್ಳಿ. ಅದಕ್ಕೆ ಶುಂಠಿ ಪೇಸ್ಟ್, ಮೆಣಸಿನಕಾಯಿ, ಅರಿಶಿನ, ಸಕ್ಕರೆ, ಹಿಂಗ್, ಉಪ್ಪು, ನಿಂಬೆ ರಸ ಮತ್ತು ಎಣ್ಣೆ ಸೇರಿಸಿ ಕಲಸಿ. ಅಗತ್ಯವಿರುವಷ್ಟು 1 ಕಪ್ ನೀರು ಹಾಕಿ ಮೃದುವಾದ ಬ್ಯಾಟರ್ ತಯಾರಿಸಿ. 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಅದಕ್ಕೆ ಅರ್ಧ ಟೀಸ್ಪೂನ್ ಅಡಿಗೆ ಸೋಡಾವನ್ನು ಹಾಕಿ. ಮಧ್ಯಮ ಉರಿಯಲ್ಲಿ 20 ನಿಮಿಷಗಳ ಕಾಲ ಧೋಕ್ಲಾ ಮಿಶ್ರಣವನ್ನು ಕೇಕ್ ಪ್ಯಾನ್ ಗೆ ಹಾಕಿ ಸ್ಟೀಮ್ ಮಾಡಿ. 5 ನಿಮಿಷಗಳ ಕಾಲ ಧೋಕ್ಲಾವನ್ನು ತಣ್ಣಗಾಗಲು ಬಿಡಿ. ಧೋಕ್ಲಾವನ್ನು ಬಯಸಿದ ಆಕಾರಕ್ಕೆ ಕತ್ತರಿಸಿ.


ಮಧ್ಯಮ ಉರಿಯಲ್ಲಿ ಒಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಸಾಸಿವೆ, ಜೀರಿಗೆ, ಎಳ್ಳಿನ ಬೀಜಗಳು ಮತ್ತು ಹಿಂಗ್ ಸೇರಿಸಿ ಫ್ರೈ ಮಾಡಿ. ನಂತರ ಮೆಣಸಿನಕಾಯಿ, ಕರಿ ಬೇವು ಎಲೆಗಳನ್ನು ಸೇರಿಸಿ. ಅರ್ಧ ಕಪ್ ನೀರು, 1 ಟೀ ಸ್ಪೂನ್ ಸಕ್ಕರೆ ಮತ್ತು ಉಪ್ಪು ಸೇರಿಸಿ ಕುದಿಸಿ. ಅದಕ್ಕೆ ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಧೋಕ್ಲಾ ಮೇಲೆ ಒಗ್ಗರಣೆಯನ್ನು ಸುರಿಯಿರಿ. ಅಲಂಕರಿಸಲು, ಕೊತ್ತಂಬರಿ ಸೊಪ್ಪು ಮತ್ತು ತುರಿದ ತೆಂಗಿನಕಾಯಿಯನ್ನು ಟಾಪ್ ಮೇಲೆ ಹಾಕಿದರೆ ರುಚಿಕರವಾದ ಧೋಕ್ಲಾ ಸವಿಯಲು ಸಿದ್ದವಾಗುತ್ತದೆ.

ಇದನ್ನೂ ಓದಿ :- ‘ಚಿಕನ್ ಕಥಿ ರೋಲ್’ – ಒಮ್ಮೆ ಮನೆಯಲ್ಲಿ ಟ್ರೈ ಮಾಡಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!