ತುಳಸಿ ಹಬ್ಬಕ್ಕೆ ತುಳಸಿಗೆ ಇಷ್ಟವಾಗುವ ಸಿಹಿ ಅವಲಕ್ಕಿ ಪೊಂಗಲ್ ಮಾಡೋದು ಹೇಗೆ ಗೊತ್ತಾ..?

ಕಾರ್ತಿಕ ಶುದ್ಧ ದ್ವಾದಶಿಯಂದು ತುಳಸೀ ಪೂಜೆ ( TULASI POOJE ) ಯನ್ನು ಸ್ತ್ರೀಯರು ನಿಯಮದಿಂದ ಮಾಡುತ್ತಾರೆ.

ಕಾರ್ತಿಕ ಶುದ್ಧ ದ್ವಾದಶಿಯಂದು ತುಳಸೀ ಪೂಜೆ ( TULASI POOJE ) ಯನ್ನು ಸ್ತ್ರೀಯರು ನಿಯಮದಿಂದ ಮಾಡುತ್ತಾರೆ. ದೇವರಿಗೆ ತುಳಸೀ ಅರ್ಚನೆ ಮಾಡಿ ಉತ್ಧಾನ ದ್ವಾದಶಿಯಂದು ವಿಶೇಷ ಪೂಜೆ ಮಾಡುತ್ತಾರೆ. ಈ ಬಾರಿ ನವೆಂಬರ್ 5 ರಂದು ಶನಿವಾರ ತುಳಸಿ ಪೂಜೆಯನ್ನು ಆಚರಿಸಲಾಗುತ್ತದೆ. ಈ ಬಾರಿ ನವೆಂಬರ್ 5 ರಂದು ಶನಿವಾರ ತುಳಸಿ ಪೂಜೆಯನ್ನು ಆಚರಿಸಲಾಗುತ್ತಿದೆ. ಈ ತುಳಸಿ ಹಬ್ಬಕ್ಕೆ ತುಳಸಿಗೆ ಇಷ್ಟವಾದ ಸಿಹಿ ಅವಲಕ್ಕಿ ಪೊಂಗಲ್ ( AVALAKKI PONGAL ) ಮಾಡೋದು ಪದ್ದತಿ. ಈ ಸಿಹಿಯಾದ ಅವಲಕ್ಕಿ ಪೊಂಗಲ್ ಮಾಡುವ ವಿಧಾನ ಹೇಗೆಂದು ನೋಡೋಣ…


ಅವಲಕ್ಕಿ ಪೊಂಗಲ್ ಮಾಡಲು ಬೇಕಾಗಿರುವಂತಹ ಸಾಮಗ್ರಿಗಳು
ಅವಲಕ್ಕಿ – 1 ಬಟ್ಟಲು
ಬೆಲ್ಲ – 1 ಅಚ್ಚು
ಏಲಕ್ಕಿ ಪುಡಿ – 1 ಚಮಚ
ತುಪ್ಪ – 2 ಚಮಚ
ದ್ರಾಕ್ಷಿ – 1 ಚಮಚ
ಗೋಡಂಬಿ – 1 ಚಮಚ
ಲವಂಗ – 3-4 ಎಸಳು  ಇದನ್ನೂ ಓದಿ :- ಗುಜರಾತಿನ ಫೇಮಸ್ ಫುಡ್ ಧೋಕ್ಲಾ ಮಾಡೋದು ಹೇಗೆ ಗೊತ್ತಾ…?


ಮಾಡುವ ವಿಧಾನ
ಮೊದಲಿಗೆ ಒಂದು ಪಾತ್ರೆಯನ್ನು ತೆಗೆದುಕೊಂಡು ಅವಲಕ್ಕಿ ಹಾಕಿ ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ಒಲೆಯ ಮೇಲೆ ಒಂದು ಬಾಣಲಿಯನ್ನು ಇಟ್ಟು ಅದಕ್ಕೆ ಸ್ವಲ್ ತುಪ್ಪವನ್ನು ಹಾಕಿ ನಂತರ ಲವಂಗ ದ್ರಾಕ್ಷಿ ಗೋಡಂಬಿ ಎಲ್ಲವನ್ನು ಹಾಕಿ ಫ್ರೈ ಮಾಡಿ. ನಂತರ ಇನ್ನೊಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಬೆಲ್ಲವನ್ನು ಹಾಕಿ ನಂತರ ಸ್ವಲ್ಪ ನೀರನ್ನು ಹಾಕಬೇಕು. ಅದಾದ ಮೇಲೆ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಪಾಕ ಮಾಡಿಕೊಳ್ಳಬೇಕು ನಂತರ ಅವಲಕ್ಕಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಕೊನೆಯಲ್ಲಿ ದ್ರಾಕ್ಷಿ ಗೋಡಂಬಿ ಹಾಕಿ ಮಿಕ್ಸ್ ಮಾಡಬೇಕು . ರುಚಿಕರವಾದ ಅಂತಹ ಅವಲಕ್ಕಿ ಸ್ವೀಟ್ ಪೊಂಗಲ್ ಸಿದ್ದ .

 ಇದನ್ನೂ ಓದಿ :- EGG CUTLET – ಸಂಜೆ ಸ್ನ್ಯಾಕ್ಸ್ ಗೆ ಈಸಿಯಾಗಿ ಮೊಟ್ಟೆ ಕಟ್ಲೆಟ್ ಮಾಡಿ..!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!