ಮನೆಯಲ್ಲಿಯೇ ಫಟಾ ಫಟ್ ಎಂದು ಸಬ್ಬಕ್ಕಿ ಪಾಯಸ ಮಾಡಿ

ಯಾವುದೇ ಹಬ್ಬ ಕಾರ್ಯಕ್ರಮಗಳಲ್ಲಿ ಸಿಹಿಯೂಟದ ಜೊತೆಗೆ ಪಾಯಸ ಕಡ್ಡಾಯವಾಗಿ ಹಾಕುತ್ತಾರೆ. ಮಕ್ಕಳಿಂದ ವಯಸ್ಸಾದವರವರೆಗೂ ಪಾಯಸ ಎಂದರೆ ಎಲ್ಲರೂ ಬಾಯಿ ಚಪ್ಪರಿಸುತ್ತಾರೆ. ಪಾಯಸದಲ್ಲಿ ಹಾಲು ಪಾಯಸ, ಶಾವಿಗೆ ಪಾಯಸ, ಹೆಸರು ಬೆಳೆ ಪಾಯಸ ಹೀಗೆ ವಿಧ, ವಿಧವಾದ ಹಲವಾರು ಪಾಯಸಗಳಿದೆ. ಅವುಗಳಲ್ಲಿ ಸಬ್ಬಕ್ಕಿ ಪಾಯಸ ಕೂಡ ಒಂದು. ನಿಮಗೆ ತಕ್ಷಣಕ್ಕೆ ಸಿಹಿ ಮಾಡಿ ಸವಿಯ ಬೇಕೆಂದರೆ ಮನೆಯಲ್ಲಿಯೇ ಫಟಾ ಫಟ್ ಎಂದು ಸಬ್ಬಕ್ಕಿ ಪಾಯಸ ಮಾಡಿ ಸವಿಯಬಹುದು. ಹಾಗಾದರೆ ಸಿಂಪಲ್ಲಾಗಿ ಸಬ್ಬಕ್ಕಿ ಪಾಯಸ ಮಾಡೋದು ಹೇಗೆ ಅನೋದನ್ನ ನೊಡೋಣ…


ಬೇಕಾಗಿರುವ ಸಾಮಾಗ್ರಿಗಳು : –
ಸಬ್ಬಕ್ಕಿ- 1 ಕಪ್
ಸಕ್ಕರೆ –
ದ್ರಾಕ್ಷಿ, ಗೋಡಂಬಿ -5 ರಿಂದ 6
ಬಾದಾಮಿ ಪುಡಿ – 2 ಚಮಚ
ಕೇಸರಿ ದಳ – 2
ಹಾಲು – 3 ಕಪ್
ತುಪ್ಪ -1 ಚಮಚ  ಇದನ್ನೂ ಓದಿ :- ಸಿಂಪಲಾಗಿ ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ರೈಸ್ ಕಟ್ಲೆಟ್ ಮಾಡೋದು ಹೇಗೆ ಗೊತ್ತಾ..?


ಮಾಡುವ ವಿಧಾನ :-

ಒಂದು ಬಾಣಲೆಗೆ ತುಪ್ಪ ಹಾಕಿ ದ್ರಾಕ್ಷಿ ಗೋಡಂಬಿಯನ್ನು ಹುರಿದುಕೊಳ್ಳಬೇಕು. ನಂತರ
ಬಾಣಲೆಗೆ ಹಾಲನ್ನು ಹಾಕಿ ನೀರಿನಲ್ಲಿ ನೆನೆಸಿಟ್ಟಿದ್ದ ಸಬ್ಬಕ್ಕಿಯನ್ನು ಬೆರೆಸಬೇಕು.
ಸಬ್ಬಕ್ಕಿ ಬೆಂದ ನಂತರ ಇದಕ್ಕೆ ಸಕ್ಕರೆ ಹಾಕಬೇಕು. ನಂತರ ಒಂದು ಕಪ್ ಹಾಲಿನಲ್ಲಿ ನೆನಸಿಟ್ಟ ಕೇಸರಿಯನ್ನು ಮಿಶ್ರಣ ಮಾಡಬೇಕು. ಬಳಿಕ 5-6 ನಿಮಿಷ ಚೆನ್ನಾಗಿ ಕುದಿಸಬೇಕು. 10 ನಿಮಿಷ ಕುದಿಸಿದ ನಂತರ ಬಾದಾಮಿ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಬೆರೆಸಬೇಕು. ಪಾಯಸವನ್ನು ಸ್ಟವ್ ಮೇಲಿಂದ ಕೆಳಗೆ ಇಳಿಸಿ ಕಪ್ ನಲ್ಲಿ ಬಡಿಸಿಕೊಂಡರೆ ಪಾಯಸ ಸವಿಯಲು ಸಿದ್ಧವಾಗುತ್ತೆ.

 ಇದನ್ನೂ ಓದಿ :-  ಕೇವಲ 10 ನಿಮಿಷದಲ್ಲಿ ರುಚಿಕರವಾದ ಪಾಲಕ್ ರೈಸ್ ಮಾಡುವುದು ಹೇಗೆ ಗೊತ್ತಾ..?

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!