ಮೈಕ್ರೋಸಾಫ್ಟ್ ಕಂಪನಿಯ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಮಾಜಿ ಪತ್ನಿ ಮೆಲಿಂಡಾ ಅವರನ್ನು ಮತ್ತೆ ಮದುವೆಯಾಗುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳನ್ನು ಸಾಕಷ್ಟು ನಾಟಕೀಯವೆಂದು ಬಣ್ಣಿಸಿದರು.
ಇದರೊಂದಿಗೆ ಕೊರೊನಾ ಸಾಂಕ್ರಾಮಿಕ ಮತ್ತು ಅವರ ವಿಚ್ಛೇದನದೊಂದಿಗಿನ ವಿಚಿತ್ರವಾದ ವಿಷಯವೆಂದರೆ ಮಕ್ಕಳನ್ನು ಬಿಟ್ಟು ದೂರವಿದ್ದದ್ದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮಕ್ಕಳು ಬೆಳೆದು ಸಂಸಾರವನ್ನು ತೊರೆದ ನಂತರ ಪ್ರತಿಯೊಂದು ಮದುವೆಯೂ ಪರಿವರ್ತನೆಯ ಹಾದಿಯತ್ತ ಸಾಗುತ್ತವೆ. ಆದಾಗ್ಯೂ ಅವರು ತಮ್ಮ ಮದುವೆಯನ್ನು ಮಹಾನ್ ಮದುವೆ ಎಂದು ಕರೆದುಕೊಂಡಿದ್ದಾರೆ.
ನಾನು ಬೇರೆ ಯಾರನ್ನೂ ಮದುವೆಯಾಗಲು ಇಷ್ಟಪಡುವುದಿಲ್ಲ ಎಂದು ತಿಳಿಸಿದ್ದಾರೆ. ನಾನು ಮತ್ತೆ ಮೆಲಿಂಡಾಳನ್ನು ಮದುವೆಯಾಗುತ್ತೇನೆ. ನನ್ನ ಭವಿಷ್ಯದ ವಿಷಯದಲ್ಲಿ, ನಾನು ಯಾವುದೇ ಯೋಜನೆಗಳನ್ನು ಹೊಂದಿಲ್ಲ ಎಂದಿದ್ದಾರೆ.
ಮೆಲಿಂಡಾ ಅವರೊಂದಿಗಿನ ಅವರ ಪ್ರಸ್ತುತ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇನ್ನೂ ಅವಳೊಂದಿಗೆ ನಾನು ಒಳ್ಳೇಯ ಸ್ನೇಹಿತನಾಗಿಯೇ ಇದ್ದು, ಅವಳೊಂದಿಗೆ ನಾನು ಬಹಳ ಪ್ರಮುಖ ಹಾಗೂ ನಿಕಟ ಸಂಬಂಧವನ್ನು ಹೊಂದಿದ್ದೇನೆ ಎಂದು ತಿಳಿಸಿದರು. ಜೂನ್ನಲ್ಲಿ ನಾವಿಬ್ಬರು ಸೇರಿ ವಾರ್ಷಿಕ ಸಭೆಯನ್ನು ಒಟ್ಟಿಗೆ ಆಯೋಜಿಸಲಿದ್ದೇವೆ. ನಾವು ಒಟ್ಟಿಗೆ ಕೆಲಸ ಮಾಡಲು ಇಚ್ಚಿಸುತ್ತೇವೆ. ನನಗೆ ತುಂಬಾ ಸಂತೋಷವಾಗಿದ್ದು, ನಿಜ ಹೇಳಬೇಕಾದರೆ ನಾವಿಬ್ಬರು ಒಟ್ಟಾಗಿಯೇ ಮೈಕ್ರೋಸಾಫ್ಟ್ ಫೌಂಡೇಶನ್ ಅನ್ನು ನಿರ್ಮಿಸಿದ್ದೇವೆ ಎಂದರು.
ಇದನ್ನೂ ಓದಿ :- ಮೈಸೂರಿಗೆ ಭೇಟಿ ನೀಡಲಿದ್ದಾರೆಯೇ ಪ್ರಧಾನಿ ಮೋದಿ?