Gujarat Election Results- ಗುಜರಾತ್ ನಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ, ಕಾಂಗ್ರೆಸ್ ದಾಖಲೆ ಪುಡಿಪುಡಿ

ದೇಶದ ಗಮನ ಸೆಳೆದಿದ್ದ ಗುಜರಾತ್ ( GUJURATH ) ವಿಧಾನಸಭೆ ಚುನಾವಣೆಯ ಫಲಿತಾಂಶ (Gujarat Assembly Election Results) ಪ್ರಕಟಗೊಂಡಿದ್ದು, ಇದುವರೆಗಿನ ಎಲ್ಲ ದಾಖಲೆಗಳನ್ನು ಬಿಜೆಪಿ (BJP) ಧೂಳಿಪಟ ಮಾಡಿದೆ.

ದೇಶದ ಗಮನ ಸೆಳೆದಿದ್ದ ಗುಜರಾತ್ ( GUJURATH ) ವಿಧಾನಸಭೆ ಚುನಾವಣೆಯ ಫಲಿತಾಂಶ (Gujarat Assembly Election Results) ಪ್ರಕಟಗೊಂಡಿದ್ದು, ಇದುವರೆಗಿನ ಎಲ್ಲ ದಾಖಲೆಗಳನ್ನು ಬಿಜೆಪಿ (BJP) ಧೂಳಿಪಟ ಮಾಡಿದೆ. 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರತೀಯ ಜನತಾ ಪಕ್ಷ ಇತಿಹಾಸ ನಿರ್ಮಿಸಿದೆ. 1985ರಲ್ಲಿ 149 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ದಾಖಲೆ ಮುರಿದಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗುಜರಾತ್ನಲ್ಲಿ ಕಾಂಗ್ರೆಸ್ ಅತಿ ಕಡಿಮೆ ಸ್ಥಾನ ಪಡೆದಿದ್ದು, ಹೀನಾಯವಾಗಿ ಸೋಲೊಪ್ಪಿಕೊಂಡಿದೆ.

182 ಕ್ಷೇತ್ರಗಳಿರುವ ಗುಜರಾತ್ನಲ್ಲಿ ಬಹುಮತಕ್ಕೆ ಬೇಕಾಗಿರುವುದು 92 ಕ್ಷೇತ್ರ. 2002ರಲ್ಲಿ 127 ಸ್ಥಾನ ಗೆದ್ದಿದ್ದು, ಗುಜರಾತ್ನಲ್ಲಿ ಬಿಜೆಪಿಯ ಇದುವರೆಗಿನ ಉತ್ತಮ ಸಾಧನೆಯಾಗಿತ್ತು. ಗೋದ್ರಾ ಹತ್ಯಾಕಾಂಡದ ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿ ಅತಿಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಇತಿಹಾಸ ಬರೆದಿತ್ತು. ಆದರೆ, 20 ವರ್ಷಗಳ ಬಳಿಕ ಆ ದಾಖಲೆಯನ್ನು ಕೂಡ ಮುರಿದಿರುವ ಬಿಜೆಪಿ ಈ ಬಾರಿ 150ಕ್ಕೂ ಕ್ಷೇತ್ರ ಗೆದ್ದಿದೆ.  ಇದನ್ನು ಓದಿ : –  ಗುಜರಾತ್ ನಲ್ಲಿ ಸತತ ಏಳನೇ ಬಾರಿ ಬಿಜೆಪಿಗೆ ಅಧಿಕಾರದ ಗದ್ದುಗೆ – ಸಂಜೆ 6 ಗಂಟೆಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

ಬಿಜೆಪಿ ( BJP ) ಯು ಗುಜರಾತ್ನಲ್ಲಿ ಈ ಬಾರಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಗುರಿಯನ್ನು ಇಟ್ಟುಕೊಂಡಿತ್ತು. 27 ವರ್ಷ ಆಡಳಿತ ನಡೆಸಿದ್ದ ಬಿಜೆಪಿ ಈ ಸಲ ದೊಡ್ಡ ಮಟ್ಟದ ವಿಜಯ ಸಾಧಿಸಲೇಬೇಕು ಎಂದು ಮೋದಿ-ಶಾ ಜೋಡಿ ಪ್ಲಾನ್ ರೂಪಿಸಿತ್ತು. ಅದಕ್ಕಾಗಿ ಅನೇಕ ತಂತ್ರಗಳನ್ನು ಕೇಸರಿ ಪಡೆ ಗುಜರಾತ್ನಲ್ಲಿ ಉರುಳಿಸಿತ್ತು. 20ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್ ನೀಡದೇ ಹೊಸ ಮುಖಗಳಿಗೆ ಕೇಸರಿ ಪಾಳೆಯ ಅವಕಾಶ ನೀಡಿತ್ತು. ಇದು ಕೂಡ ಬಿಜೆಪಿಯ ದೊಡ್ಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಬಾರಿ ಕನಿಷ್ಠ 150 ಸೀಟುಗಳನ್ನು (ಒಟ್ಟು 182 ಕ್ಷೇತ್ರಗಳ ಪೈಕಿ) ಗೆಲ್ಲಲೇಬೇಕು ಎಂದು ಗುಜರಾತ್ ನಾಯಕರಿಗೆ ಕೇಂದ್ರ ಸಚಿವ ಅಮಿತ್ ಶಾ ಖಡಕ್ ಸೂಚನೆ ನೀಡಿದ್ದರು.

ಇದನ್ನು ಓದಿ : –  ಗುಜರಾತ್ ಚುನಾವಣೆ ಮುಂದಿನ ಭವ್ಯ ಭಾರತಕ್ಕೆ ಹಿಡಿದ ಕೈಗನ್ನಡಿ – ಸಚಿವ ವಿ.ಸೋಮಣ್ಣ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!