ವಿಜಯನಗರ (Vijayanagara) ದಲ್ಲಿ ಪಡಿತರ ಅಕ್ಕಿ (Rice) ಯನ್ನ ಅಕ್ರಮವಾಗಿ ದಾಸ್ತಾನು ಮಾಡಿಟ್ಟಿದ್ದ ಅಡ್ಡದ ಮೇಲೆ ಕೊಟ್ಟೂರು ಪೊಲೀಸರು (Police) ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ನಿರೀಕ್ಷಕಿ ಕಮಲ ಗುಡ್ಡಪ್ಪರ್, ಕೊಟ್ಟೂರು PSI ವಡಕಪ್ಪ ನೇತೃತ್ವದಲ್ಲಿ ದಾಳಿ ನಡೆದಿದೆ.
ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಪಡಿತರ ಅಕ್ಕಿಯನ್ನ ವಶಕ್ಕೆ ಪಡೆದಿದ್ದಾರೆ. ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮದ ಅರಿಶಿನಬಾವಿ ಓಣಿಯಲ್ಲಿ ಘಟನೆ ನಡೆದಿದೆ. ದಾಳಿ ವೇಳೆ ಸರಿಸುಮಾರು 61 ಕ್ವಿಂಟಾಲ್ ಅಕ್ರಮ ಪಡಿತರ ಅಕ್ಕಿ ವಶಕ್ಕ ಪಡೆಯಲಾಗಿದೆ. ಸುಮಾರು 1,38,998 ರೂಪಾಯಿ ಮೌಲ್ಯಕ್ಕೆ ಬೆಲೆ ಬಾಳುತ್ತೆ ಅಂತ ಪೊಲೀಸರು ಅಂದಾಜಿಸಿದ್ದಾರೆ. ಇನ್ನು, ಪಡಿತರವನ್ನ ಅಕ್ರಮವಾಗಿ ಸಂಗ್ರಹಣೆ ಮಾಡಿದ್ದ ಮಂಜುನಾಥ್ ಶೆಟ್ಟಿಯನ್ನು ವಶಕ್ಕೆ ಪಡೆದಿದ್ದು, ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೊಂದೆ ಕಡೆಗೆ ಪಡಿತರವನ್ನ ಅಕ್ರಮವಾಗಿ ಸಂಗ್ರಹಿಸಿದ್ನಾ..? ಅಥವಾ ಇನ್ನು ಬೇರೆಡೆ ಇಂತಹ ಕೆಲಸಕ್ಕೆ ಕೈಹಾಕಿದ್ದಾನೋ ಅಂತ ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ : – ನಾಳೆ ನಾನು ಸಿದ್ದರಾಮಯ್ಯ ಪೇ ಸಿಎಂ ಟಿ ಶರ್ಟ್ ಹಾಕಿಕೊಳ್ಳುತ್ತೇವೆ – ಡಿ.ಕೆ ಶಿವಕುಮಾರ್