ವಿಜಯನಗರ (Vijayanagara) ದಲ್ಲಿ ಕೋವಿಡ್ (Covid) ನಿಂದ ಸಾವನ್ನಪ್ಪಿದ ಅಭಿಮಾನಿ ಮನೆಗೆ ಶಿವಣ್ಣ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ರಾಜ್ ಅಭಿಮಾನಿ ಬಾಣದ ಶ್ರೀಧರ್ ಕಳೆದ ವರ್ಷ ಕೊವಿಡ್ ಗೆ ಬಲಿಯಾಗಿದ್ರು.
ಬಾಣದ ಶ್ರೀಧರ್ ನೋಡಲು ಜೂನಿಯರ್ ರಾಜಕುಮಾರ್ ನಂತೆ ಇದ್ದ. ಬಾಣದ ಶ್ರೀಧರ್ ರಾಜಕುಮಾರ್ ನಂತೆ ವೇಷ ಭೂಷಣ ತೊಡುತ್ತಿದ್ದ. ಅಷ್ಟು ಮಾತ್ರವಲ್ಲ ಶ್ರೀಧರ್ ರಾಜ್ ಕುಮಾರ್ ಅನುಯಾಯಿಯಾಗಿದ್ದ. ಇದನ್ನು ಓದಿ : – ಮಂಗಳೂರಿನಲ್ಲಿ ಕುಕ್ಕರ್ ಬ್ಲ್ಯಾಸ್ಟ್ ಮೂಲಕ ಬಿಜೆಪಿ ವೋಟರ್ ಲಿಸ್ಟ್ ಹಗರಣವನ್ನು ಡೈವರ್ಟ್ ಮಾಡಿದೆ- ಡಿಕೆಶಿ ಗಂಭೀರ ಆರೋಪ
ಇದೇ ವೇಳೆ ಜೋಗದ ತಾತಯ್ಯ ( ದಿಗಂಬರ ರಾಜ ಭಾರತಿ ಶ್ರೀಗಳು ) ಅವರನ್ನು ಶಿವಣ್ಣ ಭೇಟಿ ಮಾಡಿದ್ದಾರೆ. ಹೊಸಪೇಟೆ ತಾಲೂಕಿನ ಇಂಗಳಿ ಗ್ರಾಮದಲ್ಲಿರುವ ಶಾಲೆಗೆ ಭೇಟಿ ನೀಡಿದ್ದಾರೆ. ಅನ್ನಪೂರ್ಣೇಶ್ವರಿ ವಸತಿಯುತ ವಿದ್ಯಾಪೀಠಕ್ಕೆ ಭೇಟಿ ನೀಡಿ ಶಿವಣ್ಣ ದಂಪತಿ ಚರ್ಚೆ ನಡೆಸಿದ್ದಾರೆ. ಇಲ್ಲಿನ ಹೈಸ್ಕೂಲ್ ನ್ನು ಶಕ್ತಿಧಾಮಕ್ಕೆ ಪಡೆಯುವಂತೆ ಜೋಗದ ತಾತಯ್ಯ ಮನವಿ ಮಾಡಿದ್ದಾರೆ. ಜೋಗದ ತಾತಯ್ಯನ ಮನವಿಗೆ ಶಿವಣ್ಣ ಸ್ಪಂದಿಸಿದ್ದಾರೆ. ವಾರದೊಳಗೆ ಶಾಲೆಯನ್ನ ಶಕ್ತಿಧಾಮಕ್ಕೆ ಪಡೆಯುವ ಬಗ್ಗೆ ತಿಳಿಸುವುದಾಗಿ ಶಿವರಾಜ್ ಕುಮಾರ್ ಹೇಳಿದ್ದಾರೆ.
ಇದನ್ನು ಓದಿ : – ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ವಿಜಯನಗರ ರಾಜಧಾನಿ- ಆನಂದ್ ಸಿಂಗ್ ಅಚ್ಚರಿಯ ಹೇಳಿಕೆ