ಆನೆಗಳ ಗಾಂಭೀರ್ಯ ನಡೆ ನೋಡೋದೇ ಚೆಂದ. ಇವುಗಳ ನಡುವೆ ಒಂದು ಸಣ್ಣ ಮರಿಯಾನೆಯ ಗಾಂಭೀರ್ಯ ಹೆಜ್ಜೆ. ರಸ್ತೆಯಿಂದ ಕಾಡಿಗೆ ಹೋಗುವಾಗ ಅನೆ ಮರಿಗೆ ಗಜಪಡೆಗಳು ಟೈಟ್ ಸೆಕ್ಯೂರಿಟಿ ನೀಡಿವೆ . ಮೂರ್ನಾಲ್ಕು ಆನೆಗಳಿರುವ ಗುಂಪೊಂದು ರಸ್ತೆಯುದ್ದಕ್ಕೂ ಗಾಂಭೀರ್ಯ ನಡೆಯ ಹೆಜ್ಜೆ ಹಾಕಿವೆ.
ಈ ಗುಂಪನ್ನು ಸೂಕ್ಷ್ಮವಾಗಿ ಗಮನಿಸಿದರೆ ಆ ಗುಂಪಿನ ನಡುವೆ ಸಣ್ಣ ಆನೆಮರಿಯೊಂದು ಕಾಣಿಸುತ್ತದೆ. ದೊಡ್ಡ ಆನೆಗಳು ರಸ್ತೆಯಲ್ಲಿ ಒಂದು ಸ್ವಲ್ಪವೂ ಜಾಗ ಇಲ್ಲದಂತೆ ನಡೆದುಕೊಂಡು ಹೋಗುತ್ತಿದ್ದಾಗ ಚೋಟುದ್ದ ಕಾಲುಗಳ ಮರಿಯಾನೆ ಮುದ್ದುಮುದ್ದಾಗಿ ಓಡಾಡುವುದನ್ನು ಕಾಣಬಹುದು. ಹೀಗೆ ತನ್ನ ಬಳಗದಲ್ಲಿ ಜನಿಸಿದ ಮರಿಯಾನೆಗೆ ಯಾವುದೇ ಅಪಾಯ ಬರದಂತೆ ಕಾಡಿನ ಕಡೆಗೆ ಕರೆದುಕೊಂಡು ಹೋಗಿವೆ.
ಈ ದೃಶ್ಯಾವಳಿಯನ್ನು ತಮಿಳುನಾಡಿನ (Tamil nadu) ಸತ್ಯಮಂಗಲಂ (Sathya mangala) ಕೊಯಮತ್ತೂರು (Coimbatore) ರಸ್ತೆಯಲ್ಲಿ ಸೆರೆಹಿಡಿಯಲಾಗಿದೆ. ದೊಡ್ಡ ಆನೆಗಳು ಮರಿ ಆನೆಗೆ ಭದ್ರತೆ ನೀಡಿರುವ ವಿಡಿಯೋವನ್ನು IFS ಅಧಿಕಾರಿ ಸುಸಂತ ನಂದಾ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. “ಮುದ್ದಾದ ನವಜಾತ ಶಿಶುವಿಗೆ ಆನೆ ಹಿಂಡಿಗಿಂತ ಉತ್ತಮವಾದ ಭದ್ರತೆಯನ್ನು ಭೂಮಿಯ ಮೇಲೆ ಯಾರು ಕೂಡ ನೀಡಲು ಸಾಧ್ಯವಿಲ್ಲ. ಇದು Z+ + + ಆಗಿದೆ” ಎಂದು ಶೀರ್ಷಿಕೆ ನೀಡಿದ್ದಾರೆ. ಇದನ್ನೂ ಓದಿ : – 2ರೂ ಭಿಕ್ಷೆ ಬೇಡಿ ನಿರ್ಮಿಸಿದ್ದ ವಸತಿ ನಿಲಯ ಇಂದು 5 ಸಾವಿರ ಮಕ್ಕಳಿಗೆ ಅಕ್ಷರ ದಾಸೋಹ ನೀಡುತ್ತಿದೆ – ಇದು ಎಲ್ಲಿದೆ ಗೊತ್ತಾ..?
ಈ ವಿಡಿಯೋ ವೈರಲ್ ಆಗಿ 174k ವೀಕ್ಷಣೆಗಳು ಪಡೆದಿವೆ ಮತ್ತು 8 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ದೊಡ್ಡ ಆನೆಗಳು ಮರಿಯಾನೆಯನ್ನು ಯಾವುದೇ ಭದ್ರತೆಗೂ ಕಡಿಮೆ ಇಲ್ಲದಂತೆ ರಕ್ಷಣೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ : – ಪ್ರಧಾನಿ ಮೈಸೂರು ಪ್ರವಾಸದ ವೇಳೆ ಆದ ಖರ್ಚು ಎಷ್ಟು ಗೊತ್ತಾ..?