ಬೆಂಗಳೂರು: ಸಾಲ ತೀರಿಸೋಕೆ ಪರದಾಡುತ್ತಿದ್ದ ಅಸಿಸ್ಟೆಂಟ್ ಲೋಕೋ ಪೈಲಟ್ (Assistant Loco Pilot) ಕಳ್ಳತನದ (Theft) ದಾರಿ ಹಿಡಿದು ಜೈಲು ಸೇರಿದ್ದಾರೆ. ಅಸಿಸ್ಟೆಂಟ್ ಲೋಕೋ ಪೈಲಟ್ ಪಡಿ ಸ್ವರಾಜ್ ಅವರನ್ನು ಬಂಧಿಸಿ 3 ಲಕ್ಷದ 33 ಸಾವಿರದ 489 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಅರಸಿಕೆರೆ ರೈಲ್ವೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಒಂದು ವರ್ಷದ ಹಿಂದೆಯಷ್ಟೇ ತುಂಬು ಬಡ ಕುಟುಂಬದ ಹುಡಗಿಯನ್ನ ಮದುವೆಯಾಗಿದ್ದ ಪಡಿ ಸ್ವರಾಜ್ ಸುಮಾರು 13 ಲಕ್ಷ ಸಾಲ ಮಾಡಿಕೊಂಡಿದ್ದರು. ಮೈ ತುಂಬಾ ಇದ್ದ ಸಾಲ ತೀರಿಸಲಾಗದೇ ಒದ್ದಾಡುತ್ತಿದ್ದರು. ಈ ವೇಳೆ ಬೆಂಗಳೂರಿನಿಂದ ಉಡುಪಿಗೆ ಪ್ರಯಾಣಿಸುತ್ತಿದ್ದ ಓರ್ವ ಪ್ರಯಾಣಿಕರು ಮಲಗಿದ್ದಾಗ ಅವರ ಲ್ಯಾಪ್ ಟಾಪ್ ಬಾಗ್ ಕಳ್ಳತನ ಮಾಡಿದ್ದನು.
ಅನುಮಾನ ಬಂದು ಪೊಲೀಸರು, ಪಡಿ ಸ್ವರಾಜ್ ಟ್ರಾಲಿ ಬ್ಯಾಗ್ ಪರಿಶೀಲಿಸಿದ್ದು, ಅತನ ಬ್ಯಾಗ್ನಲ್ಲಿ ಮೊಬೈಲ್ ಫೋನ್ಗಳು, ಆಭರಣ ಪತ್ತೆಯಾಗಿದೆ. ಅದರ ಬಗ್ಗೆ ಕೇಳಿದಾಗ, ಅನಂತರ ಪೊಲೀಸರ ವಿಚಾರಣೆಯಲ್ಲಿ ಕಳ್ಳತನ ಮಾಡುತ್ತಿರೋದಾಗಿ ತಪ್ಪೊಪ್ಪಿಕೊಂಡರು. ಆರೋಪಿಯ, ವಿಚಾರಣೆಯಿಂದ ಒಟ್ಟು 5 ಪ್ರಕರಣಗಳು ಹೊರ ಬಂದಿದೆ.