ಬೆಂಗಳೂರು : ಹಲವು ದಿನಗಳಿಂದ ಕೊಂಚ ಇಳಿಕೆ ಕಂಡಿದ್ದ ಚಿನ್ನ, ಬೆಳ್ಳಿ ದರದಲ್ಲಿ ಮತ್ತೆ ಏರಿಕೆಯಾಗಿದೆ. ಕೊರೊನಾ ಕರ್ಫ್ಯೂ, ಲಾಕ್ ಡೌನ್ ಬಿಸಿ ಆಭರಣಗಳ ಮೇಲೂ ತಟ್ಟಿದೆ.
ಇಂದು ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 150ರೂ ಏರಿಕೆಯಾಗಿದ್ದು, 44,300ರೂ ತಲುಪಿದೆ. 24 ಕ್ಯಾರೆಟ್ ನ ಚಿನ್ನದ ಬೆಲೆ 10 ಗ್ರಾಂ ಗೆ 1,700 ರೂ ಏರಿಕೆಯಾಗಿದ್ದು, 48,330 ರೂ ಆಗಿದೆ.
ಬೆಳ್ಳಿ ದರದಲ್ಲಿಯೂ ಏರಿಯಾಗಿದ್ದು, ಕೆಜಿ ಬೆಳ್ಳಿಗೆ 5,500 ರೂಪಾಯಿಗೆ ಏರಿಕೆಯಾಗುವ ಮೂಲಕ 1ಕೆ.ಜಿ. ಬೆಳ್ಳಿ 73,300 ರೂಪಾಯಿಗೆ ತಲುಪಿದೆ.