ನವದೆಹಲಿ: ಭಾರತದ ಮಾಜಿ ಅಟಾರ್ನಿ ಜನರಲ್, ಪದ್ಮವಿಭೂಷಣ ಪುರಸ್ಕೃತ ಸೋಲಿ ಸೊರಾಬ್ಜಿ (91) ಕೊರೊನಾ ಸೋಂಕಿನಿಂದ ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಸೋಲಿ ಸೊರಾಬ್ಜಿ ಅವರು 1953ರಲ್ಲಿ ಬಾಂಬೆ ಹೈಕೋರ್ಟ್ ನಲ್ಲಿ ತಮ್ಮ ಕಾನೂನು ವೃತ್ತಿಯನ್ನು ಆರಂಭಿಸಿದ್ದರು. 1971ರಲ್ಲಿ ಸುಪ್ರೀಂಕೋರ್ಟ್ನಲ್ಲಿ ಸೀನಿಯರ್ ಕೌನ್ಸಿಲ್ ಆಗಿದ್ದರು.
ಮೊದಲ ಬಾರಿಗೆ 1989-90 ಅವಧಿಗೆ ಬಳಿಕ, 1998-2000 ಅವಧಿಗೆ ಮತ್ತೊಮ್ಮೆ ಅವರು ಅಟಾರ್ನಿ ಜನರಲ್ ಆಗಿ ನಿಯುಕ್ತರಾಗಿದ್ದರು.