ಪತ್ನಿಯ ಐಡಿ ಕಾರ್ಡ್ ಬಳಸಿಕೊಂಡು ಲಾಕ್ ಡೌನ್ ಸಂದರ್ಭದಲ್ಲಿ ರಾಜಾರೋಷವಾಗಿ ತಿರುಗಾಡುತಿದ್ದ ಪತಿರಾಯ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದು ಪೇಚಿಗೆ ಸಿಲುಕಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನಡೆದಿದೆ.
ನಾಲ್ಕು ದಿನಗಳ ಕಾಲ ಯಾದಗಿರಿ ಜಿಲ್ಲೆಯನ್ನು ಸಂಪೂರ್ಣ ಲಾಕ್ ಮಾಡಲಾಗಿದೆ. ಇದರಿಂದಾಗಿ ಫೀಲ್ಡಿಗಿಳಿದ ಸುರಪುರ ಉಪ ವಿಭಾಗದ ಡಿವೈಎಸ್ಪಿ ವೆಂಕಟೇಶ್ ಹುಗಿಬಂಡಿ ಹಾಗೂ ಹಾಗೂ ಕಮೀಷನರ್ ರಮೇಶ ಪಟ್ಟೆದಾರ್ ಕೈಗೆ ಪತ್ನಿಯ ಗುರುತು ಪತ್ರ ತೋರಿಸಿಕೊಂಡು ತಿರುಗುತ್ತಿದ್ದ ಗ್ರಾಮ ಪಂಚಾಯಿತಿ ಸದಸ್ಯ ಸಿಕ್ಕಿಬಿದ್ದಿದ್ದಾನೆ.
ಅಧಿಕಾರಿಗಳು ಗ್ರಾಮ ಮಂಚಾಯತ್ ಸದಸ್ಯೆಯ ಪತಿಗೆ ಫುಲ್ ಕ್ಲಾಸ್ ತಗೆದುಕೊಂಡಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯ ಆದ್ರೇ ನೀನೇನು ದೊಡ್ಡ ತೀಸ್ ಮಾರ್ ಖಾನಾ…! ನಮ್ಮ ಕಾರ್ಪೊರೇಟ್ ಗಳನ್ನೇ ನಾವು ಹೊರಗೆ ಬಿಡ್ತಿಲ್ಲ ನಾಲಾಯಕ್.. ನಿಮ್ಮ ಮನೆಯಲ್ಲಿ ಅಡ್ಮಿಟ್ ಆದ್ರೆ, ನಮ್ಮ ಮನ್ಯಾಗ ಸತ್ತಾರ ಹೊರಗ ಬರಬ್ಯಾಡ ಅಂದ್ರ ತಿಳಿತೈತಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿಯಿಂದ ಬಂದಿದ್ದ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ರಾಮಕೃಷ್ಣ ಎಂಬ ವ್ಯಕ್ತಿ, ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ಹೊರಟಿದ್ದ. ಈ ವೇಳೆ ತನ್ನ ಪತ್ನಿಯ ಗುರುತಿನ ಚೀಟಿ ಧರಿಸಿ ಬಂದಿದ್ದ ರಾಮಕೃಷ್ಣ, ತಪಾಸಣೆ ನಡೆಸುವ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಿಯಮ ಉಲ್ಲಂಘಿಸಿದ್ದಕ್ಕಾಗಿ ಮತ್ತು ಪತ್ನಿಯ ಗುರುತಿನ ಚೀಟಿ ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಪೊಲೀಸರು 4 ಸಾವಿರ ರೂ. ದಂಡ ವಿಧಿಸಿದ್ದಾರೆ.