ಬೆಂಗಳೂರು : ರಾಜ್ಯದಲ್ಲಿ ನೂರಕ್ಕೆ ನೂರಷ್ಟು ನಾಯಕತ್ವದ ಬದಲಾವಣೆ ಚಟುವಟಿಕೆಗಳು ನಡೆಯುತ್ತಿದ್ದು, ಕೆಲ ಸಚಿವರು, ಶಾಸಕರು ಪ್ರಯತ್ನಿಸುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಾಯಕತ್ವದ ಬದಲಾವಣೆಯ ವಿಚಾರವಾಗಿ ಕೆಲ ಸಚಿವರು, ಶಾಸಕರು ಪ್ರಯತ್ನಿಸುತ್ತಿದ್ದಾರೆ. ದೆಹಲಿಯಲ್ಲಿ ಅನೇಕ ಸಚಿವರು, ಶಾಸಕರು ಬೀಡುಬಿಟ್ಟಿರುವುದು ನಿಜ. ಈ ಬಗ್ಗೆ ಪ್ರತ್ಯೇಕ ಸಭೆಗಳನ್ನು ನಡೆಸಿದ್ದು, ಅಲ್ಲಿಯೂ ಕೆಲ ಸಚಿವರು ಭಾಗಿಯಾಗಿರುವುದು ನನ್ನ ಗಮನಕ್ಕೆ ಬಂದಿದೆ ಎಂದರು.
ಈ ಬೆಳವಣಿಗೆಗಳನ್ನು ನಾನು ಪಕ್ಕಕ್ಕಿಟ್ಟೆದ್ದೇನೆ. ನನ್ನ ಆದ್ಯತೆ ಏನಿದ್ದರೂ ಕೊರೊನಾ ನಿಯಂತ್ರಣಕ್ಕೆ ತರುವ ಕೆಲಸ ಮಾಡುತ್ತಿದ್ದೇನೆ. ಕೊರೊನಾ ವಿರುದ್ದದ ಹೋರಾಟ ನನಗೆ ಮುಖ್ಯವಾಗಿದೆ. ನನ್ನ ಗಮನ ಅತ್ತ ಕಡೆ ಅಷ್ಟೆ ಎಂದು ಹೇಳಿದರು.
ಈವರೆಗೆ ನಾಯಕತ್ವದ ಬದಲಾವಣೆ ಸುದ್ದಿಯೇ ಸುಳ್ಳು ಯಡಿಯೂರಪ್ಪನವರು ನಮ್ಮ ನಾಯಕರು ಎಂದು ಹೇಳಿದ್ದ ಸಚಿವ ಅಶೋಕ್ ಇದೀಗ ಏಕಾಏಕಾ ನೂರಕ್ಕೆ ನೂರಷ್ಟು ನಾಯಕತ್ವದ ಬದಲಾವಣೆ ಚಟುವಟಿಕೆಗಳು ನಡೆಯುತ್ತಿದೆ ಎಂಬ ಹೇಳಿಕೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.