ರಾಜ್ಯದಲ್ಲಿ ಇದುವರೆಗೆ 1370 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, 51 ಮಂದಿ ಮೃತಪಟ್ಟಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಅತ್ಯಧಿಕ 557 ಪ್ರಕರಣಗಳು ದೃಢಪಟ್ಟಿವೆ.
ಸರಕಾರದ ಅಂಕಿ-ಅಂಶ ಪ್ರಕಾರ 156 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿರು ಧಾರವಾಡ 2ನೇ ಸ್ಥಾನದಲ್ಲಿದೆ. ಕಲಬುರಗಿಯಲ್ಲಿ 104, ಬಾಗಲಕೋಟೆಯಲ್ಲಿ 70, ವಿಜಯಪುರ 57, ಕೋಲಾರ 43, ಶಿವಮೊಗ್ಗ 38, ರಾಯಚೂರು 46, ಬೆಳಗಾವಿ 47, ಮೈಸೂರು 35 ಪ್ರಕರಣಗಳು ದೃಢಪಟ್ಟಿವೆ.
ರಾಜ್ಯದ 51 ಮಂದಿ ಬ್ಲ್ಯಾಕ್ ಫಂಗಸ್ ಗೆ ಬಲಿಯಾಗಿದ್ದು, 27 ಮಂದಿ ಗುಣಮುಖಿತರಾಗಿದ್ದಾರೆ. 1292 ಮಂದಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.