ಸ್ಯಾಂಡಲ್‌ವುಡ್‌ನ ಭರ್ಜರಿ ಸಿನಿಮಾ ಖ್ಯಾತಿಯ ನಿರ್ದೆಶಕ ಚೇತನ್ ಕುಮಾರ್ ಇಂದು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೊನಾ ಹಿನ್ನಲೆಯಲ್ಲಿ ಚಿತ್ರರಂಗದ ಕೆಲವರಿಗಷ್ಟೇ ಇಲ್ಲಿ ಆಹ್ವಾನಿಸಿದ್ದು, ಚೇತನ್ ಸ್ನೇಹಿತರು ಹಾಗೂ ಚಿತ್ರರಂಗದವರು ಬಂದು ನವದಂಪತಿಗೆ ಶುಭಹಾರೈಸಿದ್ದಾರೆ.
ಮೈಸೂರಿನ ನಿರ್ಮಾಣ್ ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿವಾಹ ಸಮಾರಂಭ ನೆರವೇರಿದೆ. ಚೇತನ್ ಆತ್ಮೀಯ ಹಾಗೂ ನಟ ಆಕ್ಷನ್-ಪ್ರಿನ್ಸ್ ಧ್ರುವಾಸರ್ಜಾ, ನಿರ್ದೆಶಕ ಎ.ಪಿ.ಅರ್ಜುನ್, ಕನಕಪುರ ಶ್ರೀನಿವಾಸ್, ಹರಿ ಸಂತು ಬಂದು ಚೇತನ್‌ಗೆ ಶುಭಹಾರೈಸಿದ್ದಾರೆ.
ಚಿತ್ರರಂಗದಲ್ಲಿ ಭರ್ಜರಿ, ಬಹದ್ದೂರ್ ಹಾಗೂ ಭರಾಟೆ ಯಶಸ್ಸಿನ ಬಳಿಕ ಈಗ ಚೇತನ್ ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚೇತನ್ ಕುಮಾರ್ ಮುಂದಿನ ದಾಂಪತ್ಯ ಜೀವನ ಸುಖಕರವಾಗಿರಲಿ ಅಂತ ಕನ್ನಡ ಚಿತ್ರರಂಗ ಶುಭ ಹಾರೈಸುತ್ತಿದೆ.