ಜುಲೈ 19ರಿಂದ ಆಗಸ್ಟ್ 13ರವರೆಗೆ ಲೋಕಸಭೆ ಮುಂಗಾರು ಅಧಿವೇಶನ ನಡೆಸಲು ಸಚಿವ ಸಂಪುಟ ಶಿಫಾರಸು ಮಾಡಿದೆ.
ಕೇಂದ್ರ ಸಂಸದೀಯ ಮಂಡಳಿ ಜುಲೈ 19ರಿಂದ ಆಗಸ್ಟ್ 13ರವರೆಗೆ ಸುಮಾರು ಒಂದು ತಿಂಗಳ ಕಾಲ ಅಧಿವೇಶನ ನಡೆಸಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ. 2020ರ ಮಾರ್ಚ್ ನಲ್ಲಿ ಕೊನೆಯ ಬಾರಿಗೆ ಅಧಿವೇಶನ ನಡೆದಿತ್ತು.
ಈ ಬಾರಿ ನಡೆಯುವ ಅಧಿವೇಶನದಲ್ಲಿ 179 ರಾಜ್ಯಸಭಾ ಸದಸ್ಯರಿಗೆ ಲಸಿಕೆ ಪಡೆದಿರಬೇಕು. ಲೋಕಸಭೆಯ 540 ಸದಸ್ಯರ ಪೈಕಿ ಈಗಾಗಲೇ 403 ಸಂಸದರು ಮೊದಲ ಡೋಜ್ ಲಸಿಕೆ ಪಡೆದಿದ್ದಾರೆ.