ಬೆಂಗಳೂರು: ಮಗು ಕಿಡ್ನಾಪ್ ಮಾಡಿ ಮಾರಾಟ ಮಾಡಿದ್ದ ಯುವಕನೊಬ್ಬನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ವಿಭಾಗದ ಬ್ಯಾಟರಾಯನಪುರ ಪೊಲೀಸರಿಂದ ಕಾರ್ತಿಕ್ (24) ಎಂಬಾತನನ್ನು ಬಂಧಿಸಿದ್ದಾರೆ.
ಕಳೆದ ವರ್ಷ ಬ್ಯಾಟರಾಯನಪುರದ ಶಾಮಣ್ಣ ಗಾರ್ಡನ್ ನಲ್ಲಿ ಬಾಲಕನ ಕಳ್ಳತನವಾಗಿದ್ದು, ಮಗು ಕಳ್ಳತನ ಮಾಡಿ ಹೊಸೂರು ಬಳಿಯ ಯಮರೆ ಎನ್ನುವ ಗ್ರಾಮದಲ್ಲಿ ಮಾರಾಟ ಮಾಡಿದ್ದ. ಅರವತ್ತು ಸಾವಿರಕ್ಕೆ ಮಾರಾಟ ಮಾಡಿದ್ದ ಕಾರ್ತಿಕ್ ಪರಿಚಿತರ ಮನೆಯಲ್ಲಿಯೇ ಮಗು ಕಿಡ್ನಾಪ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಳೆದ ಒಂದು ವರ್ಷದಿಂದ ಆರೋಪಿ ಮೇಲೆ ನಿಗಾ ಇಟ್ಟಿದ್ದ ಪೊಲೀಸರು. ಮಗು ಮಾರಾಟ ಸುಳಿವು ಪತ್ತೆ ಹಚ್ಚಿ ಆರೋಪಿ ಕಾರ್ತಿಕ್ ನನ್ನು ಬಂಧಿಸಿದ್ದಾರೆ.
ಮಗುವನ್ನ ಪತ್ತೆ ಹಚ್ಚಿ ಸಿಡಬ್ಲ್ಯೂಸಿ( ಚೈಲ್ಡ್ ವೆಲ್ಫರ್ ಕಮಿಟಿ)ಯ ಅನುಮತಿ ಪಡೆದು ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಪೋಷಕರ ಮಡಿಲಿಗೆ ಮಗು ಒಪ್ಪಿಸಿದ್ದಾರೆ. ಒಂದು ವರ್ಷದ ಬಳಿಕ ಹೆತ್ತವರ ಮಡಿಲಿಗೆ ಪುಟ್ಟ ಬಾಲಕ ಸೇರಿದಂತಾಗಿದೆ.