ನೂರಕ್ಕೂ ಹೆಚ್ಚು ಪ್ರಯಾಣಿಕರು ತುಂಬಿದ್ದ 2 ದೋಣಿಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಹಲವಾರು ಮಂದಿ ನಾಪತ್ತೆಯಾದ ಘಟನೆ ಅಸ್ಸಾಂನ ಜೊರತ್ ನ ಬ್ರಹ್ಮಾಪುತ್ರ ನದಿಯಲ್ಲಿ ಸಂಭವಿಸಿದೆ.
ರಾಜಧಾನಿ ಗುವಾಹತಿಯಿಂದ ಸುಮಾರು 350 ಕಿ.ಮೀ. ದೂರದ ಜೊರತ್ ನ ನಿಮತಿ ಘಾಟ್ ಬಳಿ ಈ ದುರಂತ ಸಂಭವಿಸಿದ್ದು, ಎರಡೂ ದೋಣಿಗಳಲ್ಲಿ ಒಟ್ಟಾರೆ 100ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎನ್ನಲಾಗಿದೆ.
ಬ್ರಹ್ಮಾಪುತ್ರ ನದಿಯಲ್ಲಿನ ಮಜುಲಿ ಎಂಬ ದ್ವೀಪದಿಂದ ಒಂದು ದೋಣಿ ಎದುರುಗಡೆಯಿಂದ ಬಂದ ದೋಣಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.