ಭಾರತೀಯ ವಾಯುಪಡೆಯ ಸಿ-130ಜಿ ಸೂಪರ್ ಹರ್ಕ್ಯೂಲಸ್ ಸಾರಿಗೆ ವಿಮಾನ ಇದೇ ಮೊದಲ ಬಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಕ್ಷಿತವಾಗಿ ಇಳಿದಿದೆ. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ವಿಮಾನದಿಂದ ಇಳಿದಿದ್ದಾರೆ.
ರಾಜಸ್ಥಾನದ ರಾಜಧಾನಿ ಜೈಪುರದ ರಾಷ್ಟ್ರೀಯ ಹೆದ್ದಾರಿ ಸತ್ತ-ಗಾಂಢವ್ ನಲ್ಲಿ ವಾಯುಪಡೆಯ ಸಾರಿಗೆ ವಿಮಾನ ತುರ್ತು ಸಂದರ್ಭದಲ್ಲಿ ಬಳಕೆಗಾಗಿ ಇಳಿಸಲಾಯಿತು. ಈ ಮೂಲಕ ದೇಶದ ರಾಷ್ಟ್ರೀಯ ಹೆದ್ದಾರಿಯನ್ನು ವಿಮಾನ ಇಳಿಕೆಗೆ ಮೊದಲ ಬಾರಿ ಬಳಸಲಾಯಿತು.
ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಜಂಟಿಯಾಗಿ ತುರ್ತು ಬಳಕೆಗೆ ರಾಷ್ಟ್ರೀಯ ಹೆದ್ದಾರಿ ಬಳಕೆಯ ಯೋಜನೆಗೆ ಚಾಲನೆ ನೀಡಿದರು. ಕೇವಲ 19 ತಿಂಗಳಲ್ಲಿ ಸಾರಿಗೆ ವಿಮಾನವನ್ನು ಬಳಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾಯಿತು.