ಅಟ್ಲಾಂಟಾ ಮೃಗಾಲಯದಲ್ಲಿನ ಅತ್ಯಂತ ಹಿರಿಯ 60 ವರ್ಷದ ಓಜಿ ಸೇರಿದಂತೆ ಕನಿಷ್ಠ 13 ಗೊರಿಲ್ಲಾಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಓಜಿ ಗೊರಿಲ್ಲಾ ಜಗತ್ತಿನ್ ಅತ್ಯಂತ ಹಿರಿಯ ಗೊರಿಲ್ಲಾಗಳ ಪೈಕಿ ಒಂದಾಗಿದೆ. ಶುಕ್ರವಾರ ಮೃಗಾಲಯದ ಸಿಬ್ಬಂದಿ ಗೊರಿಲ್ಲಾಗಳು ಕಫ, ಶೀತದ ಸಮಸ್ಯೆಯಿಂದ ಬಳಲುತ್ತಿರುವುದನ್ನು ಗಮನಿಸಿ ಅನುಮಾನಗೊಂಡು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ.
ಜಾರ್ಜಿಯಾದಲ್ಲಿನ ಲ್ಯಾಬ್ ಗಳಿಗೆ ಮಾದರಿ ಕಳುಹಿಸಿಕೊಡಲಾಗಿದ್ದು, ಪಾಸಿಟಿವ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಮಾದರಿಯನ್ನು ಲೋವಾ ಲ್ಯಾಬ್ ಗೆ ಕಳುಹಿಸಲಾಗಿದ್ದು, ಈ ವರದಿಗಾಗಿ ನಿರೀಕ್ಷಿಸಲಾಗಿದೆ.