ಭಾರತ ತಂಡದ ನಾಯಕ ಮಿಥಾಲಿ ರಾಜ್ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 20,000 ರನ್ ಪೂರೈಸಿದ ದಾಖಲೆ ಬರೆದರು.
ಭರ್ಜರಿ ಫಾರ್ಮ್ ನಲ್ಲಿರುವ ಮಿಥಾಲಿ ರಾಜ್ ಅರ್ಧಶತಕ ಸಿಡಿಸುವ ಮೂಲಕ ಸತತ 5ನೇ ಅರ್ಧಶತಕ ಸಿಡಿಸಿದ ಮತ್ತೊಂದು ದಾಖಲೆ ಬರೆದರು. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ 4 ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಒಂದು ಫಿಫ್ಟಿ ಸಿಡಿಸಿದ್ದರು.
ಮಿಥಾಲಿ ರಾಜ್ ಗೆ ಇದು ಒಟ್ಟಾರೆ 59ನೇ ಅರ್ಧಶತಕವಾಗಿದೆ. 107 ಎಸೆತಗಳನ್ನು ಎದುರಿಸಿದ ಮಿಥಾಲಿ 61 ರನ್ ಗಳಿಸಿದರು. ಅಲ್ಲದೇ 8ನೇ ವಿಕೆಟ್ ಗೆ ಜೂಲನ್ ಗೋಸ್ವಾಮಿ ಜೊತೆ 45 ರನ್ ಜೊತೆಯಾಟ ನಿಭಾಯಿಸುವ ಮೂಲಕ ಭಾರತ 8 ವಿಕೆಟ್ ಗೆ 225 ರನ್ ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.