ಬಳಸಿದ ಕಾರ್ಪೆಟ್, ರಗ್, ಬೆಡ್ ಶೀಟ್ ಸೇರಿದಂತೆ ಅಕ್ರಮವಾಗಿ ಬಂದಿದ್ದ ಸಾವಿರಾರು ಕಂಟೇನರ್ ಗಳಲ್ಲಿ ತುಂಬಿದ್ದ ಕಸವನ್ನು ಇಂಗ್ಲೆಂಡ್ ಗೆ ಶ್ರೀಲಂಕಾ ವಾಪಸ್ ಕಳುಹಿಸಿದೆ.
ಶ್ರೀಮಂತ ರಾಷ್ಟ್ರಗಳು ತ್ಯಾಜ್ಯವನ್ನು ಬಡ ರಾಷ್ಟ್ರಗಳಿಗೆ ಅಕ್ರಮವಾಗಿ ಸಾಗಿಸುತ್ತಿದ್ದು, ಇತ್ತೀಚೆಗೆ ಏಷ್ಯಾದ ರಾಷ್ಟ್ರಗಳು ಆಮದಾದ ತ್ಯಾಜ್ಯವನ್ನು ವಾಪಸ್ ಕಳುಹಿಸುವ ದಿಟ್ಟತನವನ್ನು ತೋರುತ್ತಿವೆ. ಈ ಸಾಲಿಗೆ ಇದೀಗ ಶ್ರೀಲಂಕಾ ಕೂಡ ಸೇರ್ಪಡೆಯಾಗಿದೆ.
2017ರಿಂದ 2019ರವರೆಗೆ ಬ್ರಿಟನ್ ನಿಂದ 3000 ಟನ್ ನಷ್ಟು ಬಳಸಿದ ವಸ್ತುಗಳು ತುಂಬಿದ ಕಂಟೇನರ್ ತಲುಪಿತ್ತು. 45 ಕಂಟೇನರ್ ಗಳಲ್ಲಿ ಬಳಸಿದ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಈ ರೀತಿ 263 ಕಂಟೇನರ್ ಗಳಲ್ಲಿ ಸುಮಾರು 3000 ಟನ್ ಕಸ ಬಂದಿರುವುದು ಪತ್ತೆಯಾಗಿದೆ.
2020ರಲ್ಲಿ ಇದೇ ರೀತಿ 21 ಕಂಟೇನರ್ ಗಳಲ್ಲಿ ಬಂದಿದ್ದ ವೈದ್ಯಕೀಯ ತ್ಯಾಜ್ಯವನ್ನು ಬ್ರಿಟನ್ ಗೆ ಕಳುಹಿಸಲಾಗಿತ್ತು.