ಶಾಸಕರು, ಸಭಾಧ್ಯಕ್ಷರು, ವಿಪಕ್ಷ ನಾಯಕ ಹಾಗೂ ಸಚೇತಕರ ಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ಆಡಳಿತಾರೂಢ ಸದಸ್ಯರು, ವಿಪಕ್ಷಗಳು ಈ ನಿಯಮಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ. ಈ ಮೂಲಕ ಯಾವುದೇ ಚರ್ಚೆ ಇಲ್ಲದೇ ಎಲ್ಲರ ವೇತನ, ಭತ್ಯೆ 5 ವರ್ಷದ ಅವಧಿಗೆ ಹೆಚ್ಚಳ ಮಾಡಲಾಯಿತು.
ಸಭಾಧ್ಯಕ್ಷರು/ ಉಪಸಭಾಧ್ಯಕ್ಷರ ಪರಿಷ್ಕೃತ ಭತ್ಯೆ (ರೂ.ಗಳಲ್ಲಿ)
ಸಂಬಳ: 50,000ದಿಂದ 75,000
ಆತಿಥ್ಯ ವೇತನ ವಾರ್ಷಿಕ: 3,00,000ದಿಂದ 4,00,000
ಮನೆ ಬಾಡಿಗೆ: 80,000 ರಿಂದ 1,60,000
ವಾಹನ ಇಂಧನ: 1000 ಲೀಟರ್ ರಿಂದ 2000 ಲೀಟರ್
ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 30 ರಿಂದ 40
ದಿನ ಭತ್ಯೆ (ಪ್ರಯಾಣ): ದಿನಕ್ಕೆ 2000ದಿಂದ 3000
ಹೊರ ರಾಜ್ಯ ಪ್ರವಾಸ: ದಿನಕ್ಕೆ 2500 +5000 ದಿಂದ 3000+7000
ವಿಪಕ್ಷ ನಾಯಕರ ಪರಿಷ್ಕೃತ ಭತ್ಯೆ
ಸಂಬಳ:40,000 ದಿಂದ 60,000
ಆತಿಥ್ಯ ವೇತನ ವಾರ್ಷಿಕ: 2,00,000 ದಿಂದ 2,50,000
ಇಂಧನ: 1000 ಲೀಟರ್ ರಿಂದ 2000 ಲೀಟರ್
ಪ್ರಯಾಣ ಬತ್ಯೆ: ಪ್ರತಿ ಕಿಲೋಮೀಟರ್ 30
ದಿನ ಬತ್ತೆ(ಪ್ರಯಾಣ): ದಿನಕ್ಕೆ 2000 ದಿಂದ 3000
ಹೊರ ರಾಜ್ಯ ಪ್ರವಾಸ: 5000 ದಿಂದ 7000
ಶಾಸಕರ ಭತ್ಯೆ:
ಸಂಬಳ:20,000ದಿಂದ 40,000
ಕ್ಷೇತ್ರದ ಭತ್ಯೆ: 40,000 ರಿಂದ 60,000
ಆತಿಥ್ಯ ವೇತನ (ವಾರ್ಷಿಕ): 2,00,000 ದಿಂದ 2,50,000
ಇಂಧನ: 1000 ಲೀಟರ್ ರಿಂದ 2000 ಲೀಟರ್
ಪ್ರಯಾಣ ಬತ್ತೆ: ಪ್ರತಿ ಕಿಲೋಮೀಟರ್ 25 ರಿಂದ 30
ದಿನ ಭತ್ಯೆ(ಪ್ರಯಾಣ): ದಿನಕ್ಕೆ 2000 ದಿಂದ 2500
ಹೊರ ರಾಜ್ಯ ಪ್ರವಾಸ: 5000 ದಿಂದ 7000
ದೂರವಾಣಿ ವೆಚ್ಚ ಯಥಾಸ್ಥಿತಿ ತಿಂಗಳಿಗೆ 20,000 ರೂ.
‘ಆಪ್ತ ಸಹಾಯಕ ಮತ್ತು ರೂಮ್ ಬಾಯ್ ಗೆ ತಿಂಗಳಿಗೆ 10,000 ರಿಂದ 20,000