ಹೆರಿಗೆ ವೇಳೆ ಮಗು ಸತ್ತಿದೆ ಎಂದು ಸುಳ್ಳು ಹೇಳಿ ನವಜಾತ ಶಿಶುವನ್ನು ಕಿಡ್ನಾಪ್ ಮಾಡಿದ ಪ್ರಕರಣದಲ್ಲಿ ಸ್ವಾಮೀಜಿ ಸೇರಿದಂತೆ ಮೂವರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
ಹಾಲಸ್ವಾಮಿ ಹರಪನಹಳ್ಳಿಯ ನಿಚ್ಚವನಹಳ್ಳಿಯ ಹಾಲಸ್ವಾಮಿ ಮಠದ ಸ್ವಾಮೀಜಿ ಹಾಗೂ ಕಂಚಿಕೇರಿಯ ಗುರುರಾಜ ಹಾಗೂ ಪ್ರಿಯಾಂಕಾ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಳಗಾವಿ ಮೂಲದ ವಸಂತ ಎಂಬ ಮಹಿಳೆಯ ಮಗು ಅಪಹರಿಸಲಾಗಿತ್ತು.
ವಸಂತ ಗರ್ಭಿಣಿಯಾಗಿದ್ದ ವೇಳೆ ವಸಂತಗೆ ಮಠದಲ್ಲಿ ಆಶ್ರಯ ನೀಡಿದ್ದ ಹಾಲಸ್ವಾಮಿ, ಹೆರಿಗೆ ನಂತರ ಗುರುರಾಜ ಹಾಗೂ ಪ್ರಿಯಾಂಕಾ ದಂಪತಿಗೆ ಮಗು ಹಸ್ತಾಂತರ ಮಾಡಿದ್ದರು.
ಹೆರಿಗೆ ವೇಳೆ ಮಗು ಸಾವನ್ನಪ್ಪಿದೆ ಎಂದು ವಸಂತಾಗೆ ಸ್ವಾಮೀಜಿ ಸುಳ್ಳು ಹೇಳಿದ್ದರು. ಆದರೆ ಮಗುವಿಗೆ ಚಿಕಿತ್ಸೆ ನೀಡಿದ ದಾಖಲೆ ಹೆರಿಗೆ ಮಾಡಿಸಿದ ವಿವರ ಕೇಳಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಅನುಮಾನಗೊಂಡ ದಾವಣಗೆರೆ ಆಸ್ಪತ್ರೆಯ ವೈದ್ಯರು ಪೊಲೀಸರಿಗೆ ದೂರು ನೀಡಿದ್ದು, ದಾವಣಗೆರೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಹಾಲಸ್ವಾಮಿ, ಕಂಚಿಕೇರಿಯ ಗುರುರಾಜ ಹಾಗೂ ಪ್ರಿಯಾಂಕಾ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆದಿದೆ.