ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳ ವಾರ್ಷಿಕ ಆದಾಯ ಮಿತಿ ಹೆಚ್ಚಳ ಮಾಡಲಾಗಿದೆ. ಆದಾಯ ಮಿತಿ ಹೆಚ್ಚಿಸಿದ ಬಗ್ಗೆ ಸಿಎಂ ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದಾರೆ. ಗ್ರಾಮೀಣ ಫಲಾನುಭವಿಗಳಿಗೆ 32 ಸಾವಿರ ರೂ ನಿಂದ 1.20 ಲಕ್ಷ ರೂ ಗೆ ಹೆಚ್ಚಳ ಮಾಡಲಾಗಿದೆ. ನಗರ ಪ್ರದೇಶಗಳ ಫಲಾನುಭವಿಗಳಿಗೆ 87,600 ರೂ ಯಿಂದ 2 ಲಕ್ಷ ರೂ ಗೆ ಏರಿಕೆ ಮಾಡಲಾಗಿದೆ. ಚರ್ಚೆ ವೇಳೆ ಆದಾಯ ಮಿತಿ ಹೆಚ್ಚಳಕ್ಕೆ ವಿಪಕ್ಷಗಳ ಸದಸ್ಯರು ಆಗ್ರಹಿಸಿದ್ದರು. ಆದಾಯ ಮಿತಿ ಹೆಚ್ಚಳಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನೆ ಸಲ್ಲಿಸಿದ್ದಾರೆ. ಬಹಳ ಬೇಗ ಸ್ಪಂದನೆ ಸಿಕ್ಕಿದೆ. ಇದು ಡಬಲ್ ಎಂಜಿನ್ ಸರ್ಕಾರ ಅಂತ ಪ್ರೂ ಆಗ್ತಿದೆ ಅಂತ ಸ್ಪೀಕರ್ ಹೇಳಿದ್ರು.
0 66 Less than a minute