ರಷ್ಯಾ-ಉಕ್ರೇನ್ ದಾಳಿಯಲ್ಲಿ ಮೃತ ಪಟ್ಟ ನವೀನ್ ಪೋಷಕರಿಗೆ ಸಾಂತ್ವನ ಹೇಳಲು ರಾಜ್ಯಪಾಲ ಧಾವರ್ ಚಂದ್ ಗೆಹಲ್ಲೋಟ್ ಇಂದು ನವೀನ್ ಮನೆಗೆ ಭೇಟಿ ನೀಡಿದ್ದಾರೆ. ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಮೃತ ನವೀನ್ ತಂದೆ ಶೇಖನಗೌಡ ನನ್ನ ಮಗನ ಸಾವಿನ ದಿನ ರಾಜ್ಯಪಾಲರು ಕೂಡಾ ನಮಗೆ ಕರೆ ಮಾಡಿ ಮಾತಾಡಿದ್ದರು.
ಇಂಥ ಸಂದರ್ಭ ಬರಬಾರದಿತ್ತು ಎಂದು ರಾಜ್ಯಪಾಲರು ಬೇಸರ ವ್ಯಕ್ತಪಡಿಸಿದರು. ನನ್ನ ಹಿರಿಯ ಮಗ ಹರ್ಷನಿಗೆ ಗೋಲ್ಡ್ ಮೆಡಲ್ ಕೊಟ್ಟಿದ್ದು ರಾಜ್ಯಪಾಲರು, ಹೀಗಾಗಿ ಅದನ್ನೂ ಕೂಡಾ ನೆನಪು ಮಾಡಿಕೊಂಡರು. ನವೀನ್ ಮೃತ ದೇಹ ಬಂದಾಗ ನಾನು ಮದ್ಯಪ್ರದೇಶದಲ್ಲಿದ್ದೆ. ಹೀಗಾಗಿ ಬರಲು ಆಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಇದನ್ನು ಓದಿ :- ಆರ್ಥಿಕ ಅವನತಿಯತ್ತ ಶ್ರೀಲಂಕಾ – ಸಕ್ಕರೆ, ಬೇಳೆಗೆ ಚಿನ್ನದ ಬೆಲೆ – 1 ಕಪ್ ಟೀ ಗೆ 100 ರೂಪಾಯಿ !
ಯಾವುದೇ ಕಷ್ಟ ಇದ್ದರೂ ನಿಮ್ಮ ಕುಟುಂಬಕ್ಕೆ ಸಹಾಯ ಹಸ್ತ ನೀಡುವೆ ಎಂದರು. ಇದೊಂದು ಒಳ್ಳೆ ಗ್ರಾಮ, ಇಲ್ಲಿ ಅನೇಕ ಹಿರಿಯರು, ಸ್ವಾಮೀಜಿಗಳು ಇದ್ದಾರೆ. ಈ ಗ್ರಾಮದಲ್ಲಿ ಒಳ್ಳೆ ವಾತಾವರಣ ಇದೆ. ಇದೇ ಕಾರಣಕ್ಕೆ ಏನೋ ದೇವರು ನಿಮ್ಮ ಮಗನನ್ನ ಬೇಗ ಕರೆದುಕೊಂಡ ಅನಿಸುತ್ತೆ. ನಾವೆಲ್ಲಾ ನಿಮ್ಮ ಜೊತೆ ಇದ್ದೇವೆ ಎಂದು ರಾಜ್ಯಪಾಲರು ನಮಗೆ ಭರವಸೆ ನೀಡಿದರು ಎಂದು ತಿಳಿಸಿದ್ರು.
ಇದನ್ನು ಓದಿ :- ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡು ತಂದೆ ಮಗಳು ಸಾವು – ಸಚಿವ ಸೋಮಶೇಖರ್ ಗೆ ಸಾರ್ವಜನಿಕರು ಘೇರಾವ್ – ಸ್ಥಳದಿಂದ ಕಾಲ್ಕಿತ್ತ ಸಚಿವ..!
ಮಾರ್ಚ್ 1 ರಂದು ನವೀನ್ ಗ್ಯಾನಗೌಡರ್ ಖಾರ್ಕೀವ್ನಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಮೃತಪಟ್ಟಿದ್ದರು. ಅದಾದ ಮೂರು ದಿನಗಳ ಬಳಿಕ ನವೀನ್ ಮೃತದೇಹದ ಗುರುತು ಪತ್ತೆಯಾಗಿತ್ತು. ಅದಾದ ಬಳಿಕ ನವೀನ್ ಶವವನ್ನು ಸ್ಥಳೀಯ ಶವಾಗಾರದಲ್ಲಿ ಇರಿಸಲಾಗಿತ್ತು. ಮಾರ್ಚ್ 1 ರಂದು ನವೀನ್ ಗ್ಯಾನಗೌಡರ್ ಖಾರ್ಕೀವ್ನಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಮೃತಪಟ್ಟಿದ್ದರು.
ಅದಾದ ಮೂರು ದಿನಗಳ ಬಳಿಕ ನವೀನ್ ಮೃತದೇಹದ ಗುರುತು ಪತ್ತೆಯಾಗಿತ್ತು. ಅದಾದ ಬಳಿಕ ನವೀನ್ ಶವವನ್ನು ಸ್ಥಳೀಯ ಶವಗಾರದಲ್ಲಿ ಇರಿಸಲಾಗಿತ್ತು. ಉಕ್ರೇನ್ನಲ್ಲಿ ರಷ್ಯಾದ ಶೆಲ್ ದಾಳಿಗೆ ಮೃತಪಟ್ಟ ನವೀನ್ ಗ್ಯಾನಗೌಡರ ಮೃತದೇಹ ಕೊನೆಗೂ ತಾಯ್ನಾಡಿಗೆ ಬಂದಿದೆ. ಆಲ್ಮೋಸ್ಟ್ 20 ದಿನಗಳ ಬಳಿಕ ನವೀನ್ ಮೃತದೇಹ ಉಕ್ರೇನ್ನಿಂದ ಚಳಗೇರಿಗೆ ಬಂದಿದ್ದು.
ಇದನನ್ನು ಓದಿ :- SUPREMECOURT- ಹಿಜಾಬ್ ಗೂ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ – ಸಿಜೆಐ