ತಡರಾತ್ರಿ ಆಹಾರ ಹರಸಿ ಬಂದ ಜಿಂಕೆ ಪಾಳು ಬಾವಿಗೆ ಬಿದ್ದು ಪರದಾಟವನ್ನು ಅನುಭವಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ನಡೆದಿದೆ.
ಬಾವಿಯಲ್ಲಿ ಬಿದ್ದು ಪರದಾಡ್ತಿದ್ದ ಜಿಂಕೆಯನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿಯನ್ನ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಬಾವಿಯಲ್ಲಿ ಬಿದ್ದಿದ್ದ ಜಿಂಕೆ ಮೇಲಕ್ಕೆತ್ತಿ ಜಿಂಕೆಯ ರಕ್ಷಣೆಯನ್ನು ಮಾಡಿದ್ದಾರೆ. ನಂತರ ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ.
ಇದನ್ನೂ ಓದಿ :- ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಕಾಫಿನಾಡ ಬಿ.ಎಸ್.ರಾಜು ನೇಮಕ