ಚಿಕ್ಕಬಳ್ಳಾಪುರ ತಾಲ್ಲೂಕಿನ ವಿಶ್ವವಿಖ್ಯಾತ ನಂದಿ ಗಿರಿಧಾಮದಲ್ಲಿ ಪ್ರವಾಸಿಗರು ಎಲ್ಲಂದರಲ್ಲೇ ಪ್ಲಾಸ್ಟಿಕ್ ವಸ್ತುಗಳು. ಪ್ಲಾಸ್ಟಿಕ್ ಬಾಟಲಿಗಳು ಬಿಸಾಡಿದ್ದರು.
ಇದನ್ನು ಮನಗಂಡ ಚಿಕ್ಕಬಳ್ಳಾಪುರ ಜಿಲ್ಲಾಢಳಿತ ಇಂದು ಸ್ಥಳೀಯ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳನ್ನು ಬಳಿಸಿಕೊಂಡು ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.”ಕ್ಲೀನ್@ ನಂದಿ” ಸ್ವಚ್ಛತಾ ಆಂದೋಲನಕ್ಕೆ ಕಾರ್ಯಕ್ರಮಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಚಾಲನೆ ನೀಡಿದರು. ಇದನ್ನೂ ಓದಿ :- ಪಿಎಸ್ಐ (PSI) ನೇಮಕಾತಿ ಅಕ್ರಮ ಪ್ರಕರಣ – ಇಂಜಿನಿಯರ್ ಮಂಜುನಾಥ್ ಮೆಳಕುಂದಿ ಸೆರೆಂಡರ್
ಸ್ವತಃ ಜಿಲ್ಲಾಧಿಕಾರಿ ಆರ್.ಲತಾ ಹಾಗೂ ಅಧಿಕಾರಿಗಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳಿಗೆ ಹುರುದುಂಬಿಸಿದರು. ಈ ವೇಳೆ ಪ್ರಾದೇಶಿಕ ಆಯುಕ್ತ ಗಿರಿರಾಜ್ ಸಿಂಗ್ ಕಿಶೋರ್ ಬಾಗವಹಿಸಿ ನೆರೆದಿದ್ದ ಎಲ್ಲರಿಗೂ ಸ್ವಚ್ಛತಾ ಆಂದೋಲನದ ವಿಧಿವಿಧಾನ ಭೋದಿಸಿದರು.
ಇನ್ನೂ ಬೆಳ್ಳಂಬೆಳ್ಳಗ್ಗೆ 6 ಗಂಟೆಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಿತ್ತು. ಆದರೆ ಸಚಿವರು ಬಾರದ ಹಿನ್ನೆಲೆ ನಿರಾಸಕ್ತಿಯಿಂದಲೇ ತಡವಾಗಿ ಅಭಿಯಾನ ಚಾಲನೆ ದೊರೆತು ಕಾಟಾಚಾರದಲ್ಲೇ ಸ್ಚಚ್ಛತಾ ಆಂದೋನ ಕಾರ್ಯಕ್ರಮ ಅಂತ್ಯವಾಯಿತು.
ಇದನ್ನೂ ಓದಿ :- ಪಿಎಸ್ಐ (PSI) ನೇಮಕಾತಿಯಲ್ಲಿ ಅಕ್ರಮ – ಬೆಂಗಳೂರಿನಲ್ಲಿ 12 ಅಭ್ಯರ್ಥಿಗಳು ಅರೆಸ್ಟ್