ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪತ್ನಿ ಅರುಣ ಲಕ್ಷ್ಮೀ ಸುದ್ದಿ ಮಾಡುತ್ತಿದ್ದಾರೆ. ತಮ್ಮ ವಿಭಿನ್ನ ಫೋಟೋ ಶೂಟ್ ಗಳ ಮೂಲಕ ಅರುಣ ಲಕ್ಷ್ಮೀ ಸುದ್ದಿ ಮಾಡಿದ್ದಾರೆ.
ವಿಶ್ವವಿಖ್ಯಾತ ಚಿತ್ರ ಕಲಾವಿದ ರಾಜಾ ರವಿವರ್ಮ ಅವರ ಕಲಾಕೃತಿಗಳ ರೂಪದಲ್ಲಿ ಪೋಸ್ ಕೊಟ್ಟು, ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ರಾಜಾ ರವಿವರ್ಮ ಶೈಲಿಯ ಮಹಿಳೆಯ ಅದ್ಬುತವಾದ ಪೇಂಟಿಂಗ್ ಗಳನ್ನು ಒಂದು ಕಡೆ ಅದೇ ಸ್ಟೈಲ್ ನಲ್ಲಿ ಮತ್ತೊಂದು ಕಡೆ ಅರುಣಾ ಅವರ ಫೋಟೋ ಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹಂಚಿಕೊಂಡಿದ್ದಾರೆ.
ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ರಾಜಾ ರವಿವರ್ಮ ಹಂಸ ದಮಯಂತಿ ಸೇರಿದಂತೆ ಅನೇಕ ಪೌರಾಣಿಕ, ಕಾಲ್ಪನಿಕ ಚಿತ್ರಗಳನ್ನು ಬಿಡಿಸಿದ್ದರು. ಇದನ್ನೂ ಓದಿ :-ಈಜುಕೊಳದಲ್ಲಿ ಬಿಕಿನಿತೊಟ್ಟ ಪ್ರಿಯಾಂಕಾ ಚೋಪ್ರಾ ಕೂಲ್ ಕೂಲ್
ಅವು ಜಗದ್ವಿಖ್ಯಾತವಾಗಿದ್ದವು. ಅವುಗಳ ರೀತಿಯಲ್ಲೇ ಆಯ್ದ ಕೆಲವು ಪೇಂಟಿಂಗ್ ಗಳ ರೀತಿಯಲ್ಲಿ ಅರುಣ ಲಕ್ಷ್ಮೀ ಪೋಸ್ ಕೊಟ್ಟಿದ್ದಾರೆ. ತಮ್ಮ ಮಡದಿಯ ಈ ಪೋಟೋಗಳನ್ನು ರವಿವರ್ಮ ಅವರಿಗೆ ಅರ್ಪಿಸಿದ್ದಾರಂತೆ ಜನಾರ್ದನ ರೆಡ್ಡಿ.
ಗೌರವದ ಪ್ರತೀಕ ಮತ್ತು ಸಾಂಪ್ರದಾಯಿಕ ಉಡುಪಿನೊಂದಿಗೆ ಸುಂದರ ಸ್ತ್ರೀ ಮೂರ್ತಿಗಳ ಚಿತ್ರಗಳನ್ನು ಬಿಡಿಸಿ ವಿಶ್ವದ ಗಮನ ಸೆಳೆದಿರುವ ರವಿವರ್ಮ ಅವರ ಆಯ್ದ ಕೆಲವು ಚಿತ್ರಗಳ ಪ್ರತಿರೂಪದ ಫೋಟೋಶೂಟ್ ಗಳು ಕಲಾವಿದನ ಕಲೆಗೆ ಗೌರವಪೂರ್ವಕವಾಗಿ ಅರ್ಪಿಸುತ್ತಿದ್ದೇನೆ ಎಂದಿದ್ದಾರೆ ಜನಾರ್ದನ ರೆಡ್ಡಿ.
ಇದನ್ನೂ ಓದಿ :- ಅಕ್ಷಯ ತೃತೀಯ ಜಾಹೀರಾತಿನಲ್ಲಿ ಸಿಂಧೂರವಿಡದೆ ಹಿಂದೂಗಳನ್ನು ಕೆಣಕಿದ ಕರೀನಾ