ಟಾಟಾ ಏಸಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ತುಮಕೂರು ರಸ್ತೆಯ ಪಾವಗಡ ತಾಲ್ಲೂಕಿನ ಕಣಿವೇನಹಳ್ಳಿ ಗೇಟ್ ಬಳಿ ನಡೆದಿದೆ.
ರಾಂಗ್ ಸೈಡ್ ನಲ್ಲಿ ಬಂದು ಟಾಟಾ ಏಸ್ ಗೆ ಡಿಕ್ಕಿಯಾದ ಬೈಕ್. ಡಿಕ್ಕಿ ಬಳಿಕ ಓರ್ವ ಗಾಯಾಳನ್ನು 200 ಮೀ ಎಳೆದು ತಂದ ಟಾಟಾ ಏಸಿ ವಾಹನ. ಬಳಿಕ ಕೆಲಕಾಲ ರಸ್ತೆಯಲ್ಲೇ ನರಳಾಡಿದ ಬೈಕ್ ಸವಾರ ಮೃತಪಟ್ಟಿದ್ದಾನೆ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :- ಅಕ್ಷಯ ತೃತೀಯದಂದು ಭರ್ಜರಿ ಸೇಲ್ – 15,000 ಕೋಟಿ ಆಭರಣ ಮಾರಾಟ