ಕಲಿಯುಗದಲ್ಲಿ ಧರ್ಮಕ್ಕೆ ಬೆಲೆ ಕೊಡೋ ಜನ ಸಿಗೋದೆ ಕಷ್ಟ. ಧರ್ಮದ ಮೂಲ ಗುರು, ಗುರು ಪರಂಪರೆಯನ್ನ ಅನುಸರಿಸಬೇಕು.
ರಾಜಕೀಯದಲ್ಲಿ ಧರ್ಮ ಉಳಿಯಲಿ, ಆದರೇ ಧರ್ಮದಲ್ಲಿ ರಾಜಕೀಯ ಬೇಡ ಎಂದು ಅಜ್ಜಯ್ಯನ ಪೀಠದ ಶ್ರೀಕರಿವೃಷಭ ದೇಶೀಕೇಂದ್ರ ಸ್ವಾಮೀಜಿ ಹೇಳಿದ್ದಾರೆ. ತಿಪಟೂರು ತಾಲ್ಲೂಕಿನ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಅಜ್ಜಯ್ಯನ ಪೀಠದಲ್ಲಿ ಧರ್ಮ ದಂಗಲ್ ಕುರಿತು ಮಾತನಾಡಿದ ಅವರು ಎಲ್ಲಾ ರಾಜಕೀಯ ಮುತ್ಸದ್ದಿಗಳಲ್ಲಿ ಧರ್ಮ ಸ್ಥಿರವಾಗಿ ಉಳಿಯಲಿ. ಇದನ್ನೂ ಓದಿ :- ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವ ಆಗಲ್ಲ – ಶ್ರೀ ರಾಮುಲು
ಇದು ನಾವು ಪರಿಪೂರ್ಣವಾಗಿ ಹೃದಯತುಂಬಿ ಹೇಳುತ್ತಿದ್ದೇವೆ. ರಾಜಕಾರಣಿಗಳು ಧರ್ಮದ ಮೂಲ ಅರಿತುಕೊಂಡು ಪರಿಪೂರ್ಣ ಸಂಘಟನೆ ಮಾಡಲಿ. ಎಲ್ಲಾ ಒಂದೇ ಮನೆಯ ಮಕ್ಕಳು ಎನ್ನುವ ವ್ಯವಸ್ಥೆಯಲ್ಲಿ ಬಾಳಲಿ ಎಂದು ದೇಶೀಕೇಂದ್ರ ಸ್ವಾಮೀಜಿ ಹೇಳಿದ್ರು.
ಇದನ್ನೂ ಓದಿ :- ಪಿಎಸ್ಐ ಪರೀಕ್ಷೆ ಅಕ್ರಮವನ್ನು ಪೊಲೀಸರೇ ಹೊರತಂದಿದ್ದಾರೆ – ಹೆಚ್.ಡಿ ಕುಮಾರಸ್ವಾಮಿ