ಹೊಸಕೋಟೆಯ ಐತಿಹಾಸಿಕ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ಭಕ್ತಸಾಗರ ಹರಿದು ಬರುತ್ತಿದೆ. ಹೊಸಕೋಟೆಯ ಪ್ರಮುಖ ರಸ್ತೆಗಳಲ್ಲಿ ಬ್ರಹ್ಮರಥೋತ್ಸವ ವೀಕ್ಷಿಸಲು ಜನ ಸಾಗರವೇ ಸೇರಿದೆ.
ಅವಿಮುಕ್ತೇಶ್ವರನ ರಥೋತ್ಸವಕ್ಕೆ ಚಾಲನೆ ನೀಡಲು ಸಚಿವ ಎಂಟಿಬಿ ನಾಗರಾಜ್,ಮತ್ತು ಶಾಸಕ ಶರತ್ ಬಚ್ಚೇಗೌಡ ಆಗಮಿಸಿದ್ದಾರೆ. ದೇವಸ್ಥಾನದಿಂದ ತಾಲೂಕು ಕಛೇರಿವರೆಗೂ ಮೆರವಣಿಗೆ ನೆಡಯಲಿದೆ.ರಥೋತ್ಸವದ ಸುತ್ತಾಮುತ್ತ ಪೋಲಿಸ್ ಖಾಕಿಗಳ ಕಣ್ಗಾವಲು ಹಾಕಲಾಗಿದೆ, ಅಹಿತಕರ ಘಟನೆಗಳು ನಡೆಯದಂತೆ 800 ಕ್ಕೂ ಅಧಿಕ ಪೊಲೀಸರನ್ನು ಮುಂಚಿತವಾಗಿ ನಿಯೋಜನೆ ಮಾಡಲಾಗಿದೆ. ವಿವಿಧ ಕಲಾ ತಂಡಗಳಿಂದ ನೃತ್ಯ ಪ್ರದರ್ಶನ ಏರ್ಪಡಿಸಿದ್ದಾರೆ. ಸಚಿವರಾದ ಎಂಟಬಿ ನಾಗರಾಜ್ ಮತ್ತು ಶಾಸಕ ಶರತ್ ಬಚ್ಚೇಗೌಡಗೆ ರಥೋತ್ಸವ ಪ್ರತಿಷ್ಟೆಯಾಗಿದೆ. ಇದನ್ನೂ ಓದಿ : – ಕಂಪಿಸಿದ ಭೂಮಿ – ಬೆಚ್ಚಿ ಬಿದ್ದ ಚಿಕ್ಕಬಳ್ಳಾಪುರ ಜನತೆ