ರಾಯಚೂರು ಜಿಲ್ಲೆಯಲ್ಲಿ ಕೊರೊನಾದಿಂದ ಶೈಕ್ಷಣಿಕವಾಗಿ ನಷ್ಟ ಅನುಭವಿಸಿದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ, ಇಂದಿನಿಂದ ಜೂನ್ 1 ರವರೆಗೂ ಕಲಿಕಾ ಚೇತರಿಕೆ ಎಂಬ ವಿಶೇಷ ಕಾರ್ಯಕ್ರಮ 1ನೇ ತರಗತಿಯಿಂದ 10ನೇ ತರಗತಿವರೆಗೂ ನಡೆಸಲಾಗುತ್ತದೆ.
ನಗರದ ಪೊಲೀಸ್ ಕಾಲೋನಿ, ಸ್ಟೇಷನ್ ಬಜಾರ್ ಇತರ ಎಲ್ಲಾ ಶಾಲೆಗಳಲ್ಲಿ ತಳಿರು-ತೋರಣಗಳಿಂದ ಸಿಂಗಾರಗೊಂಡು, ಬರುವಂಥ ವಿದ್ಯಾರ್ಥಿಗಳಿಗೆ ಶಿಕ್ಷಕರು ಸಿಹಿ ವಿತರಿಸಿ ಸಂಭ್ರಮದಿಂದ ಬರಮಾಡಿಕೊಂಡರು. ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಪುಸ್ತಕಗಳನ್ನು ನೀಡಿ ಹುರಿದುಂಬಿಸಿದರು. ಇದನ್ನೂ ಓದಿ : – 14 ವರ್ಷದ ನಂತರ ವಿಶೇಷ ದಾಖಲೆ ಬರೆದ KRS ಡ್ಯಾಂ
ಮೊದಲ ದಿನವಾಗಿದ್ದರಿಂದ ಬಿಸಿಯೂಟದಲ್ಲಿ, ವಿಶೇಷವಾದ ಸಿಹಿ ತಿನಿಸು ಮಾಡಲು ಸರ್ಕಾರ ಆದೇಶಿಸಿದೆ. ಅದೇ ರೀತಿ ಸಿಹಿ ತಿನಿಸನ್ನು ಮಾಡಲಾಗುತ್ತಿದೆ ಎಂದು ಶಾಲೆಯ ಶಿಕ್ಷಕರು ತಿಳಿಸಿದ್ದಾರೆ. ಇನ್ನೂ ಶಾಲೆಗೆ ಬಂದ ವಿದ್ಯಾರ್ಥಿಗಳು ಒಂದು ತಿಂಗಳು ಬೇಸಿಗೆ ರಜೆ ಮುಗಿಸಿ ಹರ್ಷದಿಂದ ಕಲಿಕಾ ಚಟುವಟಿಕೆಯಲ್ಲಿ ತೊಡಗಿದ್ದರು.
ಇದನ್ನೂ ಓದಿ : – ಕಂಪಿಸಿದ ಭೂಮಿ – ಬೆಚ್ಚಿ ಬಿದ್ದ ಚಿಕ್ಕಬಳ್ಳಾಪುರ ಜನತೆ