ಕಾರು ಸಮೇತ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರ ರಕ್ಷಣೆ ಮಾಡಿದ ಘಟನೆ ಗದಗ (gadag ) ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ನೆಲೋಗಲ್ ಗ್ರಾಮದ ಬಳಿ ನಡೆದಿದೆ.
ನಿರಂತರ ಮಳೆಯಿಂದಾಗಿ ನೆಲೋಗಲ್-ಬೆಳ್ಳಟ್ಟಿ ಮಧ್ಯದ ಹಳ್ಳ ಭರ್ತಿಯಾಗಿದೆ . ರಸ್ತೆ ದಾಟುವಾಗ ಹಳ್ಳದ ನೀರಿಗೆ ಸಿಲುಕಿ ಕಾರು ಕೊಚ್ಚಿ ಹೋಗಿತ್ತು . ನೀರಿನ ರಭಸಕ್ಕೆ ಸಿಲುಕಿ ಹಳ್ಳದಲ್ಲಿನ ತಡೆಗೋಡೆಗೆ ತಾಗಿಕೊಂಡು ಕಾರು ನಿಂತಿತ್ತು. ಗ್ರಾಮಸ್ಥರ ಸಹಾಯದಿಂದ ಕಾರ್ ನಲ್ಲಿದ್ದ ನಾಲ್ವರ ರಕ್ಷಣೆ ಮಾಡಲಾಗಿದೆ . ಚನ್ನವೀರಗೌಡ ಪಾಟೀಲ, ಡಾ.ಪ್ರಭು ಮನ್ಸೂರ , ಬಸನಗೌಡ ತೆಗ್ಗಿನಮನಿ ಮತ್ತು ವಿರೇಶ್ ಡಂಬಳ ಎಂಬುವವರನ್ನ ಗ್ರಾಮಸ್ಥರು ರಕ್ಷಿಸಿದ್ದಾರೆ . ಇದನ್ನೂ ಓದಿ : – ಹುಬ್ಬಳ್ಳಿಯ ಮಳೆ ಹಾನಿ ಪ್ರದೇಶಕ್ಕೆ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಭೇಟಿ