ಮಾವಿನ ತೋಟ ವೀಕ್ಷಣೆಗೆ ತೆರಳಿದ್ದಾಗ, ಬಾವಿಯೊಳಗೆ ಕಾಲುಜಾರಿ ಬಿದ್ದು, ಇಬ್ಬರು ಯುವತಿಯರು ಸಾವನ್ನಪ್ಪಿದ ಘಟನೆ ರಾಯಚೂರು ( Raichur )ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಯರಗೇರಾ ಗ್ರಾಮದ ಹೊರವಲಯದ ಹೊಲವೊಂದರ ಬಾವಿಯಲ್ಲಿ ( well ) ಈ ದುರ್ಘಟನೆ ಸಂಭವಿಸಿದೆ. ರಾಯಚೂರು ಮೂಲದ ಶಿರೀನ್(೧೯), ಮುಸ್ಕಾನ್(೧೭) ಮೃತರು ಎಂದು ಗುರುತಿಸಲಾಗಿದೆ. ರಾಯಚೂರಿ ನಿಂದ ಯರಗೇರಾಕ್ಕೆ ತಮ್ಮ ಕುಟುಂಬಸ್ಥರ ಸಂಬಂಧಿಕರ ಮನೆಯಲ್ಲಿ, ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾವಿನ ತೋಟ ವೀಕ್ಷಣೆಗೆಂದು ಹೊಲಕ್ಕೆ ತೆರಳಿದಾಗ ಬಾವಿ ವೀಕ್ಷಣೆ ಮಾಡುತ್ತಿರುವಾಗ ಕಾಲುಜಾರಿ ಮೂವರು ಯುವತಿಯರು ಬಿದ್ದಿದ್ದಾರೆ. ಮೂವರಲ್ಲಿ ಇಬ್ಬರು ಮೃತಪಟ್ಟಿದ್ದರೆ ಓರ್ವ ಯುವತಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ .ಇನ್ನಿಬ್ಬರನ್ನು ರಕ್ಷಣೆ ಮಾಡಲು ಪ್ರಯತ್ನಿಸಿದ್ದಾರೆ. ಆದ್ರೆ ಪ್ರಯತ್ನ ವಿಫಲವಾಗಿದ್ದು, ಇಬ್ಬರು ಮೃತಪಟ್ಟಿ ದ್ದಾರೆ.ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ : – ಉತ್ತರಪ್ರದೇಶದಲ್ಲಿ ಭೀಕರ ಅಪಘಾತ – ಸಿಎಂ ಬೊಮ್ಮಾಯಿ ಟ್ವೀಟ್ ಮೂಲಕ ಸಂತಾಪ