ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (Dk.Shivkumar) ಮುಖ್ಯಮಂತ್ರಿ ಆಗ್ತಾರೆ ಎಂಬ ಹೇಳಿಕೆ ಕುರಿತ ವಿಡಿಯೋ ವೈರಲ್ ಕುರಿತು ಕುಣಿಗಲ್ ಶಾಸಕ ಡಾ.ರಂಗನಾಥ್ (Rangnanth) ಸ್ಪಷ್ಟನೆ ಕೊಟ್ಟಿದ್ದಾರೆ .
ಡಿಕೆಶಿ ಸಿಎಂ ಆಗ್ತಾರೆ, ಕುಣಿಗಲ್ ಗೇ ನಾನೇ ಸಿಎಂ ಎಂದು ಹೇಳಿದ್ದೆ. ಕುಣಿಗಲ್ (Kunigal) ತಾಲೂಕಿನ ಅಭಿವೃದ್ಧಿ ಉದ್ದೇಶದಿಂದ ನಾನು ಹಾಗೇ ಹೇಳಿದ್ದೇನೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೇ ಅಭಿವೃದ್ಧಿ ಆಗಲಿದೆ ಎಂದು ಹೇಳಿದ್ದೇನೆ. ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಹಲವರು ಸಿಎಂ ರೇಸ್ ನಲ್ಲಿ ಇದ್ದಾರೆ. ನಾನು ಮಾತಿನ ಭರದಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದೆ. ಕಾಂಗ್ರೆಸ್ ನಿಂದ ಯಾರೂ ಮುಖ್ಯಮಂತ್ರಿ ಆದರೂ ಕುಣಿಗಲ್ ನಲ್ಲಿ ಅಭಿವೃದ್ಧಿ ದೃಷ್ಟಿಯಿಂದ ನಾನೇ ಸಿಎಂ ಎಂದಿದ್ದೇನೆ. ಮುಖ್ಯಮಂತ್ರಿ ಯಾರಾಗಬೇಕು ಅನ್ನೋದು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಈಗ ಉಲ್ಟಾ ಹೊಡೆದಿದ್ದಾರೆ. ಇದನ್ನೂ ಓದಿ : – RS ELECTION – ರಾಜ್ಯಸಭೆ ಚುನಾವಣೆ- ಕರ್ನಾಟಕಕ್ಕೆ ಬಿಜೆಪಿ ಉಸ್ತುವಾರಿ ಕಿಶನ್ ರೆಡ್ಡಿ