ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವುದು ಹಾಗೂ ಸೈದ್ಧಾಂತಿಕ ತಲಹದಿಯಲ್ಲಿ ಸಂಘಟನೆಯನ್ನು ಮಾಡುವ ನಿಟ್ಟಿನಲ್ಲಿ ರಾಜ್ಯ ಮಟ್ಟದ 2 ದಿನಗಳ ಕಾಲ ಚಿಂತನ ಶಿಬಿರವನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ. ಗುರುವಾರ ಹಾಗೂ ಶುಕ್ರವಾರ ಬೆಂಗಳೂರಿನ ಹೊರ ವಲಯದ ಕ್ಲಾಕ್ ಎಕ್ಸೋಟಿಕಾ ರೆಸಾರ್ಟ್ ನಲ್ಲಿ ಈ ಶಿಬಿರ ನಡೆಯಲಿದೆ.
ಈ ಹಿಂದೆ ರಾಜಸ್ಥಾನದ ಉದಯ ಪುರದಲ್ಲಿ ರಾಷ್ಟ್ರೀಯ ಮಟ್ಟದ ಕಾಂಗ್ರೆಸ್ ಚಿಂತನಾ ಶಿಬಿರ ನಡೆದಿತ್ತು. ಈ ಶಿಬಿರದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಕೈಗೊಳ್ಳಬೇಕಾದ ಕಾರ್ಯಕ್ರಮಗಳು ಹಾಗೂ ಪಕ್ಷದ ಬಲವರ್ಧನೆಯ ನಿಟ್ಟಿನಲ್ಲಿ ಮಾಡಬೇಕಾಗಿರುವ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆದಿತ್ತು. ಇದನ್ನೂ ಓದಿ : – ಕುಣಿಗಲ್ ತಾಲೂಕಿನ ಅಭಿವೃದ್ಧಿ ಉದ್ದೇಶದಿಂದ ನಾನು ಹೇಳಿದ್ದೇನೆ – ಶಾಸಕ ಡಾ. ರಂಗನಾಥ್
ಶಿಬಿರದಲ್ಲಿ ಭಾಗಿಯಾದ ರಾಜ್ಯದ ಪ್ರಮುಖರಿಗೆ ಈ ನಿಟ್ಟಿನಲ್ಲಿ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿತ್ತು. ಅದರಂತೆ ಅದನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಎರಡು ದಿನಗಳ ಕಾಲ ರಾಜ್ಯ ಮಟ್ಟದ ಚಿಂತನ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ರಾಜ್ಯ ಮಟ್ಟದ ಕಾಂಗ್ರೆಸ್ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ. ಒಟ್ಟು ಐನೂರು ಮಂದಿ ಪದಾಧಿಕಾರಿಗಳು ಎರಡು ದಿನಗಳ ಕಾಲ ಶಿಬಿರದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ : – RS ELECTION – ರಾಜ್ಯಸಭೆ ಚುನಾವಣೆ- ಕರ್ನಾಟಕಕ್ಕೆ ಬಿಜೆಪಿ ಉಸ್ತುವಾರಿ ಕಿಶನ್ ರೆಡ್ಡಿ