ನಮ್ಮ ಭಾರತ ನಿಂತಿರೋದು ಬಾಬಾ ಸಾಹೇಬ್ ಅಂಬೇಡ್ಕರ್ (Ambedker)ಅವರ ಸಂವಿಧಾನದ (Constitution) ಮೇಲೆ.ಇಡೀ ದೇಶದಲ್ಲಿ ಅಂಬೇಡ್ಕರ್ ಅವರ ಪುತ್ಥಳಿ ಇರುವಷ್ಟು ಯಾರದ್ದೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK.Shivkumar) ಹೇಳಿದ್ದಾರೆ .
ಬೆಂಗಳೂರಿನಲ್ಲಿ ಮಾತನಾಡಿದ ಅವರು ಎಲ್ಲ ಹಕ್ಕು ಕೊಟ್ಟಿರೋದು ನಮ್ಮ ಸಂವಿಧಾನದಲ್ಲಿ. ಒಬ್ಬ ಶ್ರೇಷ್ಠ ನಾಯಕ ಎಲ್ಲಾ ಧರ್ಮ, ಜಾತಿ ಸಂಸ್ಕೃತಿಯ ಹಕ್ಕು ಕೊಟ್ಟಿದ್ದು ಸಂವಿಧಾನ .ಅವತ್ತು ಕಾಂಗ್ರೆಸ್ ಸರ್ಕಾರ ಜವಬ್ದಾರಿ ಕೊಟ್ಟು, ಅವರ ಮುಖಂಡತ್ವದಲ್ಲಿ ಸಂವಿಧಾನ ರಚನೆ ಆಯಿತು. ಇಡೀ ದೇಶ ಕಳೆದ 75 ವರ್ಷದಿಂದ ಒಪ್ಪಿದ್ದೇವೆ. ಅದರಂತೆ ನಾವು ನಡೆಯುತ್ತಿದ್ದೇವೆ .ನಮ್ಮ ಸಂವಿಧಾನವನ್ನು ಹೊರ ದೇಶದವರು ಮೆಚ್ಚಿದ್ದಾರೆ. 6ನೇ ತರಗತಿಯಲ್ಲಿ ಚನ್ನಣ್ಣ ವಾಲೇಕಾರ್ (Channanna valekar) ಅವರು ಅಂಬೇಡ್ಕರ್ ಬಗ್ಗೆ ಬರೆದ ನೀ ಹೋದ ಮರುದಿನ ಎಂಬ ಕವಿತೆ ತೆಗದಿದ್ದಾರೆ . 7ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಸಮಾಜ ಸುಧಾರಕರ ಬಗ್ಗೆಯಿದೆ. ಅದರಲ್ಲಿ ಅಂಬೇಡ್ಕರ್ ಅವರ ಬಗ್ಗೆ ಮಾಹಿತಿಯಿದೆ. ಈ ಹಿಂದೆ ಪಠ್ಯಪುಸ್ತಕದಲ್ಲಿ ಅಂಬೇಡ್ಕರ್ ಅವರ ತಂದೆ, ತಾಯಿ, ಹುಟ್ಟಿದ ಸ್ಥಳ, ದಿನಾಂಕ ಹೆಸರುಗಳಿದ್ದವು. ಇದನ್ನೂ ಓದಿ : – ಸಿದ್ದರಾಮಯ್ಯಗೆ ರಾಜಕೀಯ ತಿಕ್ಕಲು ಜಾಸ್ತಿ ಆಗಿದೆ – ಚಲವಾದಿ ನಾರಾಯಣಸ್ವಾಮಿ
ಅಂಬೇಡ್ಕರ್ ಬೃಹತ್ ಹೋರಾಟಗಳನ್ನು ತೆಗೆದಿದ್ದಾರೆ. 9ನೇ ತರಗತಿ ಪುಸ್ತಕದಲ್ಲಿ ಸಂವಿಧಾನ ಶಿಲ್ಪಿ ಎಂಬುದನ್ನೇ ತೆಗೆದುಹಾಕಿದ್ದಾರೆ .ಇಂತಹ ಸರ್ಕಾರ, ಇಷ್ಟು ಬೇಜವಾಬ್ದಾರಿ ಸರ್ಕಾರ. ನೋಡಿಲ್ಲ . ನಾನು ರೋಹಿತ್ ಚಕ್ರತೀರ್ಥ (Rohith chakrateertha) ಬಗ್ಗೆ ಮಾತಾಡೋದ್ರಲ್ಲಿ ಅರ್ಥ ಇಲ್ಲ .ಇದು ಸರ್ಕಾರದ ಬೇಜವಾಬ್ದಾರಿ . ಇದು ಬಿಜೆಪಿಯ (Bjp) ಮುಖವಾಡ, ಬಿಜೆಪಿ ಮನಸ್ಥಿತಿ.ಕುವೆಂಪು (Kuvempu) ಅವರು ಇರಬಹುದು, ಭಗವದ್ಗೀತೆ (Bhagvadgeetha) ಇರಬಹುದು, ಜೈನ ಸಮುದಾಯ ಇರಬಹುದು, ನಾರಾಯಣ್ ಗುರು (Narayanguru) ಸೇರಿದಂತೆ ಎಲ್ಲರನ್ನು ಗೌರವದಿಂದ ನಾವು ಕಾಣುತ್ತೇವೆ. ಅದನ್ನು ತಿರುಚಿ, ಸಾಮಾನ್ಯರ ವರ್ಗಕ್ಕೆ ಸೇರಿಸಿದ್ದಾರೆ. ಎಸ್ಟಿ ಸಮುದಾಯದ ಸರ್ಕಾರ ಬೆನ್ನೆಲುಬಾಗಿ ನಿಂತಿದ್ದೇವೆ, ಬೇಕಾದಷ್ಟು ಕಾನೂನು ತಂದಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು . ಇದನ್ನೂ ಓದಿ : – ಆರ್ ಎಸ್ ಎಸ್ ಬಗ್ಗೆ ಮಾತಾಡಿದ್ರೆ ಹುಷಾರ್..! – ಆರ್. ಅಶೋಕ್