ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ಇಂದು ಪ್ರಚಾರ ಮಾಡ್ತಿದ್ದೇನೆ. ಬಿಜೆಪಿ ಆರ್ ಎಸ್ ಎಸ್ ಜನ್ಮ ತಾಳಿ 97 ವರ್ಷ ಆಯ್ತು ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ಈವರೆಗೂ ದಲಿತರನ್ನ ಹಿಂದುಳಿದವರನ್ನ ಅಧ್ಯಕ್ಷರನ್ನಾಗಿ ಮಾಡಿಲ್ಲ ಎಂಬ ಪ್ರಶ್ನೆ ಕೇಳಿದ್ದೆ ನಾನು. ಬಿಜೆಪಿ ಈಗ ಸಾಂಸ್ಕೃತಿಕ ಬಯೋತ್ಪಾದನೆ ಮಾಡುತ್ತಿದ್ದಾರೆ. ಪಠ್ಯ ಪುಸ್ತಕ ವಿಚಾರದಲ್ಲಿ ಈ ರೀತಿ ಮಾಡುತ್ತಿದ್ದಾರೆ. ಬೆಂಕಿ ಹಚ್ಚೋದೇ ಬಿಜೆಪಿಯವರ ಕೆಲಸ. ನನ್ನಿಂದ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಿಲ್ಲ ಎಂಬ ಯಡಿಯೂರಪ್ಪ ಮಾತಿಗೆ ಅವರಿಂದಲೂ ನಾನೇನೂ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಿಲ್ಲ ಎಂದು ಬಿಜೆಪಿ ವಿರುದ್ದ ಕಿಡಿಕಾರಿದ್ರು. ಇದನ್ನೂ ಓದಿ :- ಮೈಕ್ ದಂಗಲ್ – ಇಂದು ಬಿಜೆಪಿ ಮುಖಂಡರ ಮನೆ ಮುಂದೆ ಶ್ರೀರಾಮ ಸೇನೆ ಪ್ರತಿಭಟನೆ
ಪಿಎಸ್ ಐ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಂದ ವಿಪಕ್ಷ ನಾಯಕರಿಗೆ ಮನವಿ
ಕಷ್ಟ ಪಟ್ಟು ಪ್ರಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಅಭ್ಯರ್ಥಿಗಳು ಹೇಳಿದ್ದಾರೆ. ಮರು ಪರೀಕ್ಷೆ ನಡೆಸದಂತೆ ಮನವಿ ಮಾಡಿಕೊಂಡಿದ್ದಾರೆ. ಸಿಎಂ ಬೊಮ್ಮಾಯಿ ಜೊತೆ ಮಾತನಾಡುವುದಾಗಿ ನಾನು ಭರವಸೆ ಕೊಟ್ಟಿದ್ದೇವೆ. ಇಪ್ಪತ್ತಕ್ಕೂ ಹೆಚ್ಚು ಪಿಎಸ್ಐ ಅಭ್ಯರ್ಥಿಗಳಿಂದ ಮನವಿ ಬಂದಿದೆ ಎಂದು ತಿಳಿಸಿದ್ರು.
ನಾವು ಯಾವತ್ತಿಗೂ ಕೋಮುವಾದಿಗಳನ್ನ ವಿರೋಧಿಸುತ್ತೇವೆ. ಜೆಡಿಎಸ್ ಗಿಂತ ಮೊದಲೇ ನಾವು ತೀರ್ಮಾನ ಮಾಡಿ ಎರಡನೇ ಅಭ್ಯರ್ಥಿ ಹಾಕಿದ್ದೇವೆ. ನಮ್ಮ ಅಭ್ಯರ್ಥಿ ಹಾಕಿದ ಮೇಲೆ ಒಂದು ತಿಂಗಳು ಬಿಟ್ಟು ಹಾಕಿದ್ದಾರೆ. ಅವರು ಕೋಮುವಾದಿ ಅಭ್ಯರ್ಥಿ ಸೋಲಿಸಬೇಕು ಅಂತಿದ್ದರೆ ಅವರು ಅಭ್ಯರ್ಥಿ ಹಾಕಬೇಕಿರಲಿಲ್ಲ. ನಾವು ಅಲ್ಪಸಂಖ್ಯಾತ ಅಭ್ಯರ್ಥಿಯನ್ನ ಹಾಕಿದ್ದೇವೆ. ಮನ್ಸೂರ್ ಅಲಿಖಾನ್ ಹಾಕಿದ್ದೇವೆ. ಅವರು ಗೆಲ್ಲಿಸಬೇಕು ಅಂತಿದ್ದರೆ ನಮಗೆ ವೋಟ್ ಹಾಕಲಿ ಎಂದು ಹೇಳಿದ್ದಾರೆ. ದೇವೇಗೌಡರು ರಾಜ್ಯಸಭೆಗೆ ನಿಂತಾಗ ನಾವು ಅಭ್ಯರ್ಥಿ ಹಾಕಿದ್ದೇವಾ..? ಕುಮಾರಸ್ವಾಮಿ ಬಳಿ 37 ಜನ ಇದ್ರು ಕೂಡ ಬಿಜೆಪಿ ಅಧಿಕಾರಕ್ಕೆ ಬರಬಾರದು ಅಂತ ಅವರನ್ನೇ ಸಿಎಂ ಮಾಡಿದ್ದೆವು. ದೇವೇಗೌಡರು ಪ್ರಧಾನ ಮಂತ್ರಿ ಆಗೋಕೆ ನಾವು ಬೆಂಬಲ ನೀಡಿದ್ದೇವೆ. ನಮಗೆ ಈಗ ಅವರು ಬೆಂಬಲ ಕೊಡಲಿ. ಕೋಮುವಾದಿ ಸೋಲಿಸೋಕೆ ನಮಗೆ ಬೆಂಬಲ ಕೊಡಲಿ, ನಾವೇ ಸೋಲಿಸುತ್ತೇವೆ. ನಾವು ಅನೇಕ ಬಾರಿ ಸಹಾಯ ಮಾಡಿದ್ದೇವೆ ಎಂದು ಸಿಎಂ ಹೇಳಿದ್ರು .
ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಭೇಟಿ ವಿಚಾರ
ನಮ್ಮದು ಹಲೋ ಹಲೋ ಅಷ್ಟೇ . ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ. ಗುರಿಕಾರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. ಎಲ್ಲರೂ ಈ ಸಾರಿ ಬದಲಾವಣೆ ಬಯಸಿದ್ದಾರೆ. 30 ವರ್ಷದಿಂದ ಶಿಕ್ಷಕರ ಪರವಾಗಿ ಹೋರಾಡಿದ ವ್ಯಕ್ತಿ ಅವರು ಎಂದು ತಿಳಿಸಿದ್ರು.
ಇದನ್ನೂ ಓದಿ- ಸಿದ್ದು ನಿವಾಸಕ್ಕೆ ಚಡ್ಡಿ ತಲುಪಿಸಿದ ಛಲವಾದಿ ನಾರಾಯಣಸ್ವಾಮಿ