ರಾಜ್ಯದಲ್ಲಿ ರಾಜ್ಯಸಭೆ ಚುನಾವಣೆ (Rajyasabha election) ಗರಿಗೆದರಿದೆ. ಜೆಡಿಎಸ್ (JDS) ಅತೃಪ್ತ ಶಾಸಕ ಎಸ್.ಆರ್.ಶ್ರೀನಿವಾಸ್ (SR.Srinivas ) ತುಮಕೂರಿನಲ್ಲಿ (Tumkuru) ಮಾತನಾಡಿ ಜೆಡಿಎಸ್ ಪಕ್ಷಕ್ಕೆ ಮತ ಹಾಕುವಂತೆ ನನಗೆ ಪಕ್ಷದಿಂದ ಕರೆ ಬಂದಿಲ್ಲ ಎಂದು ಹೇಳಿದ್ರು.
ಕುಪೆಂದ್ರ ರೆಡ್ಡಿ (Kupendra reddy) ಮನೆಗೆ ಬಂದಿದ್ರು. ಸಹಾಯ ಕೇಳಿದ್ರು ನಾನು ಮಾತಾಡ್ತಿನಿ ಅಂದಿದ್ದೇನೆ. ಕುಮಾರಸ್ವಾಮಿ ನನ್ನ ಬಳಿ ಮಾತಾಡಿಲ್ಲ. ರಾಜ್ಯಸಭೆ ಚುನಾವಣೆ ಕುರಿತು ಮಾತಾಡಿಲ್ಲ. ಅವರು ಮತ ಹಾಕುವಂತೆ ಕೇಳಲ್ಲ ಅಂದುಕೊಂಡಿದ್ದೇನೆ. ಯಾಕಂದ್ರೆ ನನಗೆ ಪರ್ಯಾಯ ನಾಯಕರನ್ನು ಈಗಾಗಲೇ ಅವರು ಹುಡುಕಿದ್ದಾರೆ. ಹಾಗಾಗಿ ಅವರಿಗೆ ನನ್ನ ಅವಶ್ಯಕತೆ ಇಲ್ಲ. ನಾನು ಜೆಡಿಎಸ್ಗೆ ಮತ ಹಾಕಬೇಕು ಅಂದುಕೊಂಡಿದ್ದೇನೆ. ಆದರೆ 40 ಗಂಟೆಗಳಲ್ಲಿ ಏನುಬೇಕಾದರೂ ಆಗಬಹುದು ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವ್ರು (Siddaramaiah) ವಿಶ್ಲೇಷಣೆ ಮಾಡಿದ ರೀತಿ ನನ್ನ ಆತ್ಮಸಾಕ್ಷಿ ಮತ ಇಲ್ಲ. ನಾನು ಕುಮಾರಸ್ವಾಮಿ ಹಾಗೂ ನಿಖಿಲ್ ಬೆನ್ನಿಗೆ ಚೂರಿ ಹಾಕಿದ್ದೇನಂತೆ. ಹೀಗಾಗಿ ನನ್ನ ಮತ ಯಾರಿಗೆ ಎಂದು ಇನ್ನೂ ನಿರ್ಣಯ ಆಗಿಲ್ಲ. ಡಿಸೆಂಬರ್ವರೆಗೆ ಕಾದು ನೋಡ್ತಿನಿ.
ನಾನು ಯಾವತ್ತೂ ರೇಸಾರ್ಟ್ ರಾಜಕೀಯ ಮಾಡಿಲ್ಲ. ನಾನು ಈ ಬಾರಿಯೂ ರೆಸಾರ್ಟ್ ಗೆ ಹೋಗಲ್ಲ. ವಿಪ್ ಜಾರಿಯಾಗಿದೆ, ನಾಡಗೌಡರು ವಿಪ್ ಜಾರಿ ಮಾಡಿದ್ದಾರೆ. ಅದನ್ನ ನೋಡಿದ್ದೀನಿ ಎಂತು ಪ್ರತಿಕ್ರಿಯಿಸಿದ್ದಾರೆ. ನನಗೆ ಯಾರಿಗೂ ವೋಟ್ ಹಾಕ್ಬೇಕು ಅಂತಾ ಅನ್ನಿಸ್ತಾ ಇಲ್ಲ. ಮತದಾನಕ್ಕೆ ಹೋಗ್ತಿನೋ, ಇಲ್ವೋ ಅನ್ನೋದೇ ಗೊತ್ತಿಲ್ಲ. ಹೋದ್ರೆ ಯಾರಿಗೋ ಒಬ್ಬರಿಗೆ ವೋಟ್ ಹಾಕ್ಲೆಬೇಕು. ಪಕ್ಷದ ಏಜೆಂಟ್ ಗೆ ತೋರಿಸಿ ವೋಟ್ ಹಾಕ್ಬೇಕು ಎಂದು ಶ್ರೀನಿವಾಸ್ ಹೇಳಿದ್ದಾರೆ.
ಇದನ್ನೂ ಓದಿ : – ಸಿದ್ದರಾಮಯ್ಯ ಹಿಂದೆ ಕಾಂಗ್ರೆಸ್ ಪಕ್ಷ ಸದಾಕಾಲ ಇದೆ ಇರತ್ತೆ – ಎಚ್.ಕೆ.ಪಾಟೀಲ್